

ಚಿತ್ರದುರ್ಗ: ಮುರುಘ ರಾಜೇಂದ್ರ ಮಠದಲ್ಲಿ ಮಾ.5ರ ಬೆಳಗ್ಗೆ 10.30ಕ್ಕೆ ಶ್ರೀ ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ 30ನೇ ವರ್ಷದ 3ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಲಿದೆ.
ಕುದ್ನೂರು ತೋಂಟದಾರ್ಯ ಮಠದ ಶ್ರೀ ಸದಾಶಿವ ಸ್ವಾಮೀಜಿ, ದಾವಣಗೆರೆ ಜಿಪಂ ಸಿಇಒ ಪದ್ಮಾ ಬಸವಂತಪ್ಪ, ಕೆಎಸ್‌ಆರ್‌ಟಿಸಿ ಚಿತ್ರದುರ್ಗ ಡಿಸಿ ಜಿ.ವಿಜಯಕುಮಾರ್, ದಾಸೋಹಿ ರಾಜಲಕ್ಷ್ಮೀ, ಕೆ.ರವಿಶಂಕರರೆಡ್ಡಿ, ಸಂದೀಪ್ ಗುಂಡಾರ್ಪಿ ಮತ್ತಿತರರು ಉಪಸ್ಥಿತರಿರುತ್ತಾರೆ. ಅಂದು ಸಂಜೆ 6.30ಕ್ಕೆ ಆಯೋಜಿಸಿರುವ ಶರಣ ಸಂಗಮದಲ್ಲಿ ವೈಯಕ್ತಿಕ ಶಾಂತಿ ಮತ್ತು ವಿಶ್ವಶಾಂತಿ ವಿಷಯ ಕುರಿತು ಹರಿಹರದ ಆರೋಗ್ಯಮಾತೆ ಬಸಲಿಕಾ ಧರ್ಮಕೇಂದ್ರ ಗುರು ಡಾ.ಅಂತೋನಿ ಪೀಟರ್ ವಿಷಯಾವಲೋಕನ ಮಾಡಲಿದ್ದಾರೆ. ತುಮಕೂರು ಉಪವಾಣಿಜ್ಯ ತೆರಿಗೆ ಆಯುಕ್ತ ಎಂ.ರಂಗನಾಥ್‌ರನ್ನು ಗೌರವಿಸಲಾಗುತ್ತದೆ.