ರಸಗೊಬ್ಬರ ಚಿಲ್ಲರೆ ಮಾರಾಟ ಆರಂಭ

CTD RASAGOBBARA
Published on

ಚಿತ್ರದುರ್ಗ: ರಾಜ್ಯ ಸಹಕಾರ ಮಾರಾಟ ಮಹಾಮಂಡಳದಲ್ಲಿ ಇದೇ ಮೊದಲ ಬಾರಿಗೆ ಚಿಲ್ಲರೆಯಾಗಿ ರಸ ಗೊಬ್ಬರ ಮಾರಾಟ ಆರಂಭವಾಗಿದೆ ಎಂದು ಸಂಸ್ಥೆ ನಿರ್ದೇಶಕ ಎಸ್.ಆರ್.ಗಿರೀಶ್ ತಿಳಿಸಿದರು.

ನಗರದ ಮಹಾಮಂಡಳದ ಕಚೇರಿ ಆವರಣದಲ್ಲಿ ಇತ್ತೀಚೆಗೆ ಚಿಲ್ಲರೆ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿ, ಈವರೆಗೆ ಇಲ್ಲಿ ರಸಗೊಬ್ಬರಗಳ ಸಗಟು ವಹಿವಾಟು ಮಾತ್ರವಿತ್ತು ಎಂದರು.

ಕೆಲ ಸಹಕಾರಿ ಸಂಸ್ಥೆಗಳು ಮತ್ತು ವರ್ತಕರಿಗೆ ಗೊಬ್ಬರ ಮಾರಾಟಕ್ಕೆ ಪರವಾನಗಿ ಇರುವುದಿಲ್ಲ. ಇದರಿಂದ ಹಲವು ರೈತರಿಗೆ ಆಗುತ್ತಿದ್ದ ತೊಂದರೆ ಗಮನಿಸಿದ ಸರ್ಕಾರ ಚಿಲ್ಲರೆ ಖರೀದಿಗೆ ಅನುಕೂಲ ಒದಗಿಸಿದೆ ಎಂದು ಹೇಳಿದರು.

ಮಹಾಮಂಡಳದ ಶಾಖಾ ವ್ಯವಸ್ಥಾಪಕ ಜಿ.ಆರ್.ರಾಜಪ್ಪ, ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕ್ರಪ್ಪ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು, ಇಪ್ಕೋ ಮಾರಾಟಾಧಿಕಾರಿ ಲಕ್ಷ್ಮೀಶ್, ಎಂಸಿಎಫ್ ಅಧಿಕಾರಿ ಮೂರುಕಣ್ಣಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net