1ಕ್ಕೆ ಮಾಚಿದೇವ, ಸವಿತಾ ಜಯಂತಿ

ADC SANGAPPA (4)
Published on

ಚಿತ್ರದುರ್ಗ: ಮಡಿವಾಳ ಮಾಚಿದೇವ ಹಾಗೂ ಸವಿತಾ ಮಹರ್ಷಿ ಜಯಂತಿಯನ್ನು ಫೆ.1ರಂದು ನಗರದ ತ.ರಾ.ಸು ರಂಗಮಂದಿರಲ್ಲಿ ಆಚರಿಸಲಾಗಿದೆ ಎಂದು ಎಡಿಸಿ ಸಿ.ಸಂಗಪ್ಪ ತಿಳಿಸಿದರು.

ನಗರದ ಎಸಿ ಕಚೇರಿಯಲ್ಲಿ ಸೋಮವಾರ ಮಹನೀಯರ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈ ಇಬ್ಬರ ಜಯಂತಿಯನ್ನು ಒಗ್ಗೂಟಿ ಆಚರಿಸಲು ಮಡಿವಾಳ ಹಾಗೂ ಸವಿತಾ ಸಮಾಜದವರು ಸಮ್ಮತಿಸಿದ್ದಾರೆ ಎಂದರು.

ಅಂದು ಬೆಳಗ್ಗೆ 9.30ಕ್ಕೆ ನಗರದ ದೊಡ್ಡಪೇಟೆ ಮಡಿವಾಳ ಮಾಚಿದೇವರ ದೇವಸ್ಥಾನದಿಂದ ಮಾಚಿದೇವರ ಹಾಗೂ ಮಹರ್ಷಿ ಭಾವಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಲಾಗುವುದು. 11ಕ್ಕೆ ತರಾಸು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಇರುತ್ತದೆ.

ಸಂಪಿಗೆ ಟಿ.ತಿಪ್ಪೇಸ್ವಾಮಿ, ಪ್ರಾಧ್ಯಾಪಕ ಡಾ.ಎನ್.ಎಸ್.ಮಹಂತೇಶ್ ಉಪನ್ಯಾಸ ನೀಡುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಮಡಿವಾಳ ಸಮಾಜದ ಅಧ್ಯಕ್ಷ ಟಿ.ರಮೇಶ್, ಕಾರ್ಯದರ್ಶಿ ಚಿದಾನಂದಪ್ಪ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎನ್.ಚಂದ್ರಶೇಖರ್, ಕಾರ್ಯದರ್ಶಿ ಎನ್.ಡಿ.ಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net