ಮಂಗಗಳ ಹಸಿವು ಇಂಗಿಸುವ ಚಳಗೇರಿ

CTD MONKEY 01 (1)
Published on

ಚಿತ್ರದುರ್ಗ: ಲಾಕ್‌ಡೌನ್ ಈ ಸಂದರ್ಭದಲ್ಲಿ ಪ್ರಾಣಿ, ಪಕ್ಷಿಗಳಿಗೆ ಆಹಾರ ಒದಗಿಸುವ ಸೇವೆಯಲ್ಲಿ ಹಲವರು ತೊಡಗಿರುವುದು ಒಂದೆಡೆಯಾದರೆ ಕಳೆದ 20 ವರ್ಷಗಳಿಂದಲೂ ಕೋತಿಗಳಿಗೆ ಆಹಾರ ಪೂರೈಸುವ ಕೆಲಸವನ್ನು ಒಂದು ವ್ರತದಂತೆ ಮಾಡಿಕೊಂಡಿ ಬಂದಿರುವವರೂ ನಮ್ಮ ನಡುವೆ ಇದ್ದಾರೆ.

ಚಿತ್ರದುರ್ಗ ತಾಲೂಕು ಇಂಗಳದಾಳದ ಹಟ್ಟಿ ಕಾಫರ್ ಮೈನ್ಸ್ ನಿವೃತ್ತ ನೌಕರ ರಾಜಶೇಖರ ಚಳಗೇರಿ, ಗ್ರಾಮದ 30ಕ್ಕೂ ಹೆಚ್ಚು ಮಂಗಗಳಿಗೆ ನಿತ್ಯ ಒಂದಲ್ಲ ಒಂದು ಹಣ್ಣು, ಧಾನ್ಯ ಇತ್ಯಾದಿ ಕೊಡುತ್ತಾ ಬಂದಿದ್ದಾರೆ. ಕರೊನಾದ ಈ ಸಮಯದಲ್ಲೂ ಮಂಗಗಳಿಗೆ ಆಹಾರದ ಚಿಂತೆ ಇಲ್ಲದಂತಾಗಿದೆ.

ಶೇಂಗಾ, ಬಾಳೆಹಣ್ಣು, ಕಡ್ಲೆಕಾಳು, ತರಕಾರಿ, ಬ್ರೇಡ್, ಬಿಸ್ಕೆಟ್ ಮೊದಲಾದವುಗಳಲ್ಲಿ ಒಂದನ್ನಾದರೂ ನಿತ್ಯ ಮಂಗಗಳಿಗೆ ಹಂಚುತ್ತಿದ್ದೇನೆ. ಮೂಕ ಪ್ರಾಣಿಗಳಿಗೆ ನೀರು, ಆಹಾರ ಕೊಡುವಂಥ ಈ ಕೈಂಕರ್ಯ ನನಗೆ ತೃಪ್ತಿ ತಂದಿದೆ ಎನ್ನುತ್ತಾರೆ ಚಳಗೇರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net