

ಚಿತ್ರದುರ್ಗ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಹಿರಿಯೂರು ತಾಲೂಕಿನ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರಿಗೆ ತಾಲೂಕು ಪೆಟ್ರೊಲ್ ಬಂಕ್ ಮಾಲೀಕರ ಸಂಘದವರು ನೆರವಿನ ಹಸ್ತ ಚಾಚಿದರು.
ಅಕ್ಕಿ, ಬೇಳೆ, ಅವಲಕ್ಕಿ, ರಾಗಿ ಇತರ ಆಹಾರ ಸಾಮಾಗ್ರಿಗಳನ್ನು ತಾಲೂಕು ಆಡಳಿತಕ್ಕೆ ಒಪ್ಪಿಸಿದರು. ತಹಸೀಲ್ದಾರ್ ಸತ್ಯನಾರಾಯಣ, ಡಿ.ಎಸ್.ಮಹೇಶ್. ಮಹಲಿಂಗಪ್ಪ, ಪ್ರಸನ್ನಕುಮಾರ್, ರಘು, ಜಿ.ದಾದಾಪೀರ್ ಇತರರಿದ್ದರು.