ನೆರವಿಗಾಗಿ ಸಿಎಂಗೆ ಮನವಿ

PRATHAP JDS
Published on

ಚಿತ್ರದುರ್ಗ: ಲಾಕ್‌ಡೌನ್ ಸಂಕಷ್ಟದ ಸಮಯದಲ್ಲಿ ರಾಜ್ಯ ಅಲೆಮಾರಿ ಸಮುದಾಯಗಳನ್ನು ರಾಜ್ಯ ಸರ್ಕಾರ ಕಡೆಗಣಿಸಿದೆ ಎಂದು ಜೆಡಿಎಸ್ ಯುವ ಮುಖಂಡ ಓ.ಪ್ರತಾಪ್ ಜೋಗಿ ಆಪಾದಿಸಿದ್ದಾರೆ.

ಜೋಗಿ, ಶಿವಜೋಗಿ, ಕಪಾಲಿ ಜೋಗಿ, ಜೋಗರ್, ಜೋಗಿಯಿಸ್, ಕಿನ್ನರಿಜೋಗಿ, ಡಬ್ಬಜೋಗಿ, ಬಳೆಗಾರ ಜೋಗಿ, ನಥಪಂಥ ಜೋಗಿ ಮತ್ತು ಹಂಡಿ ಜೋಗಿ ಸೇರಿ ಸಮಾಜದ ಮುಖ್ಯವಾಹಿನಿಗೆ ಬಾರದ 10 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಅಲೆಮಾರಿ ಸಮುದಾಯಗಳನ್ನು ಸರ್ಕಾರ ನಿರ್ಲಕ್ಷಿಸಿದ್ದು, ಈಗಲಾದರು ಸರ್ಕಾರ ನೊಂದ ಸಮುದಾಯಗಳಿಗೆ ಸಹಾಯ ಧನ ಮಂಜೂರು ಮಾಡಬೇಕೆಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net