ತುರ್ತು ಸೇವೆಗೆ ಅಧಿಕಾರಿಗಳನ್ನು ಸಂಪರ್ಕಿಸಬಹುದು

DC VINOD PRIYA (1)
Published on

ಚಿತ್ರದುರ್ಗ: ಲಾಕ್‌ಡೌನ್ ಈ ಸಂದರ್ಭದಲ್ಲಿ ವಾಹನ ತುರ್ತು ಸೇವೆಗಾಗಿ ಎಎಸ್ಪಿ ಎಂ.ಬಿ.ನಂದಗಾವಿ (9480803102), ಆರ್‌ಟಿಒ ಜಿ.ಎಸ್.ಹೆಗ್ಡೆ (9449864016) ಅವರನ್ನು ಸಂಪರ್ಕಿಸುವಂತೆ ಡಿಸಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

ನಿತ್ಯ ಬಳಕೆ ವಸ್ತುಗಳ ಉಸ್ತುವಾರಿಗಾಗಿ ಆಹಾರ ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಕೆ.ಪಿ.ಮಧುಸೂದನ್(9448233477), ಎಪಿಎಂಸಿ ಉಪ ನಿರ್ದೇಶಕ ಶ್ರೀನಿವಾಸ್ (9448684666), ಡಿವೈಎಸ್ಪಿಗಳಾದ ಪಾಂಡುರಂಗ (9480803120), ರಮೇಶ್ (9480803122), ರೋಷನ್ ಜಮೀರ್ (9480803121) ಹಾಗೂ ತಾಪಂ ಇಒಗಳು, ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳನ್ನು ಸಂಪರ್ಕಿಸ ಬಹುದು.

ಸಾರ್ವಜನಿಕ ಸೇವೆ ನೀಡಲು ಸ್ವಯಂ ಸೇವಕ ಸಂಸ್ಥೆಗಳ ಗುರುತಿಸಲು ಬಿಸಿಎಂ ಜಿಲ್ಲಾ ಅಧಿಕಾರಿ ಆರ್.ಅವಿನ್ (9886907455), ಚಿತ್ರದುರ್ಗ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ (9448567337) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net