

ಚಿತ್ರದುರ್ಗ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕುಟುಂಬಗಳಿಗೆ ಆಹಾರ ಧಾನ್ಯ ಕೊರತೆಯಾಗದಂತೆ ಏಪ್ರಿಲ್ ಹಾಗೂ ಮೇ 2 ತಿಂಗಳಿನ ಪಡಿತರವನ್ನು ಏಪ್ರಿಲ್ ತಿಂಗಳಿನಲ್ಲೇ ಏಕಕಾಲದಲ್ಲಿ ವಿತರಿಸುವುದಾಗಿ ಡಿಸಿ ಆರ್.ವಿನೋತ್ ಪ್ರಿಯಾ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ನ್ಯಾಯ ಬೆಲೆ ಅಂಗಡಿಗಳಲ್ಲಿ ಮಾ.30ರಿಂದ ಪಡಿತರ ವಿತರಣೆ ಪ್ರಾರಂಭವಾಗಿದ್ದು, ಕಾರ್ಡ್‌ದಾರರಿಗೆ ಬಯೋಮೆಟ್ರಿಕ್ ಬದಲು ಮೊಬೈಲ್ ಒಟಿಪಿ ಮೂಲಕ ವಿತರಿಸಲಾಗುತ್ತಿದೆ.
ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ನ್ಯಾಯಾಬೆಲೆ ಅಂಗಡಿಗಳಲ್ಲಿ ನೂಕು ನುಗ್ಗಲಾಗದಂತೆ ಏಪ್ರಿಲ್ ಅಂತ್ಯ ದವರೆಗೂ ಪಡಿತರ ಪಡೆಯಬಹುದೆಂದು ತಿಳಿಸಿದ್ದಾರೆ.