

ಚಿತ್ರದುರ್ಗ: ಜೀವನದಲ್ಲಿ ಗಳಿಕೆಗಿಂತ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಗುಣವೇ ಶ್ರೇಷ್ಠ ಎಂದು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ಹೇಳಿದರು.
ಮಾಳಪಟ್ಟನಹಟ್ಟಿ ಸಮೀಪದ ತೀಕ್ಷ್ಣ ಅಂಧರ ಶಾಲೆಗೆ ಶನಿವಾರ ಅಕ್ಕಿ ವಿತರಿಸಿ ಮಾತನಾಡಿ, ಬಡವರು, ಶೋಷಿತ ವರ್ಗದ ಜನರ ಸಮಸ್ಯೆಗಳ ಪರಿಹಾರಕ್ಕೆ ಉಳ್ಳವರು ಮುಂದಾಗಬೇಕು. ಇದರಿಂದ ಮನಸ್ಸಿಗೆ ಶಾಂತಿ ದೊರೆಯಲಿದೆ. ಹಣ ಗಳಿಕೆ ಜತೆಗೆ ಸಾಮಾಜಿಕ ಕಾಳಜಿ ಪ್ರತಿ ವ್ಯಕ್ತಿ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.
ಕೆಪಿಸಿಸಿ ಸಹ ಸದಸ್ಯ ಮಧುಗೌಡ ಮಾತನಾಡಿ, ಅಂಧ ಮಕ್ಕಳಿಗೆ ಕಣ್ಣಿಲ್ಲವಷ್ಟೆ. ಆದರೆ, ಅವರಲ್ಲಿನ ಸೂಕ್ಷ್ಮತೆ, ವಿವಿಧ ಕಲೆಗಳಲ್ಲಿ ಆಸಕ್ತಿ ವಿಸ್ಮಯಗೊಳಿಸುತ್ತದೆ ಎಂದುತ ತಿಳಿಸಿದರು.
ಯುವ ಘಟಕದ ಜಿಲ್ಲಾ ಕಾರ್ಯದರ್ಶಿ ಶಶಾಂಕ್ ನಿರಂಜನ್, ಮೀನುಗಾರ ವಿಭಾಗದ ಜಿಲ್ಲಾಧ್ಯಕ್ಷ ಶಶಿಕಿರ್ ಕೆ.ಮೊಗವೀರ್, ವಿದ್ಯಾರ್ಥಿ ಘಟಕದ ಕಾರ್ಯಾಧ್ಯಕ್ಷ ಮಧುಸೂಧನ್ ಯಾದವ್, ಐಟಿ ವಿಭಾಗದ ರಾಜ್ಯ ಜಂಟಿ ಕಾರ್ಯದರ್ಶಿ ನಿತೀಶ್ ಮುಲ್ಕಾ ಇತರರಿದ್ದರು.