

ಚಿತ್ರದುರ್ಗ: ಖಾಸಗಿ ಲೇಔಟ್ ವಸತಿ ವಿನ್ಯಾಸದ ಅಂದಾಜು ಪಟ್ಟಿಗೆ ಲಂಚ ಪಡೆಯುತ್ತಿದ್ದ ಆರೋಪದಡಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಬ್ಬರು ಅಧಿಕಾರಿಗಳನ್ನು ಎಸಿಬಿ ಅಧಿಕಾರಿಗಳು ಬುಧವಾರ ಸಂಜೆ ಬಂಧಿಸಿದ್ದಾರೆ.
ಚಿತ್ರದುರ್ಗ ತಾಲೂಕು ಕೂನಬೇವು ಗ್ರಾಮದ ಪಿ.ಜಿ.ಮಂಜುನಾಥಾಚಾರಿ ಎಂಬುವರು ನಗರದ ಹೊರವಲಯ ಮಠದ ಕುರುಬರಹಟ್ಟಿ ಮಲ್ಲನಕಟ್ಟೆ ಸ.ನಂ. 24/4 1.6 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ವಸತಿ ವಿನ್ಯಾಸಕ್ಕೆ ಕೋರಿದ್ದರು.
ಇದರ ಅಂದಾಜು ಪಟ್ಟಿ ತಯಾರಿಸಲು ಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಂ.ಪಿ.ರಾಯಚೂರ್ ಹಾಗೂ ಸಹಾಯಕ ಇಂಜಿನಿಯರ್ ಎಂ.ಬಿ.ರವಿ 30 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಹಣ ಪಡೆಯುತ್ತಿದ್ದ ವೇಳೆ ಇಬ್ಬರು ಆರೋಪಿತರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಡಿವೈಎಸ್‌ಪಿ ನರಸಿಂಹ ವಿ.ತಾಮ್ರಧ್ವಜ, ಸಿಪಿಐ ಆರ್.ಪ್ರಹ್ಲಾದ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.