ವಿವೇಕರ ವಿಚಾರಧಾರೆ ಅಳವಡಿಸಿಕೊಳ್ಳಿ

CTD 13 polytecnik
Published on

ಚಿತ್ರದುರ್ಗ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದಿಂದ ನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಸೋಮವಾರ ರಾಷ್ಟ್ರೀಯ ಯುವ ಹಾಗೂ ಸಂವಿಧಾನ ದಿನಾಚರಣೆ ಅಂಗವಾಗಿ ಮೂಲ ಕರ್ತವ್ಯಗಳ ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಫಾಟಿಸಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಶಿವಣ್ಣ ಮಾತನಾಡಿ, ವಿವೇಕರ ವಿಚಾರ ಧಾರೆ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರಾಚಾರ‌್ಯ ಜಿ.ಎಚ್.ಹೇಮಂತ್‌ರಾಜು, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಂ.ಅನಿಲ್‌ಕುಮಾರ್ ಮಾತನಾಡಿದರು. ಸರ್ಕಾರಿ ವಿಜ್ಞಾನ ಕಾಲೇಜು ಪ್ರಾಧ್ಯಾಪಕ ಡಾ.ಕೆ.ಕೆ.ಕಾಮಾನಿ ಯುವಶಕ್ತಿ ಹಾಗೂ ಭಾರತದ ಆರ್ಥಿಕ ಅಭಿವೃದ್ಧಿ, ವಕೀಲ ಎಚ್.ಬಿ.ದೇವಿಪ್ರಸಾದ್ ಮೂಲ ಕರ್ತವ್ಯಗಳ ಕುರಿತು ಉಪನ್ಯಾಸ ನೀಡಿದರು. ನಾಗೇಶ್ ಜಗಳೂರು ಸ್ವಾಗತಿಸಿದರು. ಟಿ.ಭರತ್ ವಂದಿಸಿದರು. ಎಸ್.ಎಚ್.ಶಿವಕುಮಾರಸ್ವಾಮಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net