

ಚಿತ್ರದುರ್ಗ: ಕರೊನಾ ಸೋಂಕು ಭೀತಿಯ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಜಿಲ್ಲಾ ಮಟ್ಟದಲ್ಲಿ ನಡೆಸುವಂತೆ ಒತ್ತಾಯಿಸಿ ಗಣಿತ ಶಾಸ್ತ್ರ ಉಪನ್ಯಾಸಕರ ವೇದಿಕೆ ಪ್ರಮುಖರು ಪದವಿ ಪೂರ್ವ ಶಿಕ್ಷಣ ಇಲಾಖೆ ಡಿಡಿ ಎಂ.ಸಿ.ಶೋಭಾ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ವೇದಿಕೆ ಪ್ರಮುಖರಾದ ಎಂ.ಜಿ.ರಾಜೇಶ್, ಸಿ.ಲೋಕೇಶ್, ಸಿ.ಕೃಷ್ಣಮೂರ್ತಿ, ಮಹಮ್ಮದ್ ಗೌಸ್‌ಪೀರ್, ವಸಂತ್ ಇದ್ದರು.