ವಲಸಿಗರಿಗೆ ಆಹಾರ ಧಾನ್ಯ

DC VINOTH PRIYA
Published on

ಚಿತ್ರದುರ್ಗ: ಕೇಂದ್ರದ ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಮೇ ಮತ್ತು ಜೂನ್ ತಿಂಗಳ ಆಹಾರಧಾನ್ಯದ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದ್ದಾರೆ.

ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಮತ್ತು ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಡಿತರ ಚೀಟಿ ಇಲ್ಲದಿರುವ ವಲಸಿಗರಿಗೆ ಮೇ, ಜೂನ್ ತಿಂಗಳಲ್ಲಿ ಪ್ರತಿ ವ್ಯಕ್ತಿಗೆ 5 ಕೆ.ಜಿ ಅಕ್ಕಿ ಹಾಗೂ ಕಡಲೆಕಾಳು ಉಚಿತವಾಗಿ ವಿತರಿಸಲಾಗುವುದು.

ಮೇ 26ರಿಂದ 31ರ ವರೆಗೆ 5 ಕೆ.ಜಿ ಅಕ್ಕಿ, ಜೂನ್ 1ರಿಂದ 10ರ ವರೆಗೆ 5 ಕೆಜಿ ಅಕ್ಕಿ, ಕಡಲೇಕಾಳು ವಿತರಿಸಲಾಗುವುದು. ಜಿಲ್ಲೆಯ 22588 ವಲಸೆ ಫಲಾನುಭವಿಗಳಿಗಾಗಿ 2258.85 ಕ್ವಿಂ.ಅಕ್ಕಿ ಹಂಚಿಕೆ ಮಾಡಲಾಗಿದೆ.

ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಈ ಸೌಲಭ್ಯ ಪಡೆಯಲು ಫಲಾನುಭವಿ ಪಡಿತರ ಚೀಟಿಯನ್ನು ಹೊಂದಿರಬಾರದು. ಈ ಫಲಾನುಭವಿಗೆ ಆಧಾರ್, ಮೊಬೈಲ್ ಪೋನ್ ಕಡ್ಡಾಯ. ಓಟಿಪಿ ನಮೂದಿಸಿ, ಆಹಾರ ಧಾನ್ಯ ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net