ಸಿಹಿ ಹಂಚಿ ಕಾಂಗ್ರೆಸ್ ಕಾರ‌್ಯಕರ್ತರ ಸಂಭ್ರಮ

CTD 11 congres
Published on

ಚಿತ್ರದುರ್ಗ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ನೇಮಕದ ಹಿನ್ನೆಲೆಯಲ್ಲಿ ನಗರದ ಕಾಂಗ್ರೆಸ್ ಕಚೇರಿ ಬಳಿ ಬುಧವಾರ ಸಂಜೆ ಪಕ್ಷದ ಕಾರ‌್ಯಕರ್ತರು ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಿಸಿದರು. ಕಳೆದ ಒಂದು ವರ್ಷ ಗಳಿಂದ ನೂತನ ಅಧ್ಯಕ್ಷರ ನೇಮಕದ ವಿಷಯ ನನೆಗುದಿಗೆ ಬಿದ್ದಿತ್ತು.

ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್,ಕಾರ್ಯಾಧ್ಯಕ್ಷರಾಗಿ ಈಶ್ವರ್‌ಖಂಡ್ರೆ,ಸತೀಶ್ ಜಾರಕಿಹೊಳಿ ಹಾಗೂ ಸಲೀಂ ಅಹಮದ್ ನೇಮಕಕ್ಕೆ ಸಂತಸ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ, ಡಿ.ಕೆ.ಶಿವಕುಮಾರ್ ಸಂಘಟನೆಯ ಸಾಮರ್ಥ್ಯ ವನ್ನು ಗುರುತಿಸಿ ಹೈಕಮಾಂಡ್ ಈ ಮಾನ್ಯತೆ ನೀಡಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್.ಮಂಜುನಾಥ್,ಮಾಜಿ ಅಧ್ಯಕ್ಷ ಫಾತ್ಯರಾಜನ್,ಮುಖಂಡರಾದ ಶಬ್ಬೀರ್ ಅಹಮದ್,ವೆಂಕಟೇಶ್,ಪಿ.ಕೆ.ಮೀನಾಕ್ಷಿ,ಎಚ್ ಶಬ್ಬೀರ್‌ಭಾಷ,ಎನ್.ಡಿ.ಕುಮಾರ್,ಆರ್.ಪ್ರಕಾಶ್,ಅಪ್ಸರ್ ಕರೀಂ, ಜಿ.ಪಂ.ಸದಸ್ಯ ನರಸಿಂಹರಾಜು, ಮಾಜಿ ಸದಸ್ಯೆ ಆರತಿ ಮಹಡಿ ಶಿವಮೂರ್ತಿ ಮೊದಲಾದ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net