ಜನಮಾನಸದಲ್ಲಿ ಅಚ್ಚಳಿಯದೇ ಉಳಿದ ಕವಿ

CTD NISSAR (2)
Published on

ಚಿತ್ರದುರ್ಗ: ಕನ್ನಡ ನಾಡು ನುಡಿ ಬಗ್ಗೆ ಅನನ್ಯ ಪ್ರೀತಿ ಕಾಳಜಿ ಇಟ್ಟುಕೊಂಡಿದ್ದ ನಿಸಾರ್ ಅಹಮದ್ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದ ಕವಿ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟಿದ್ದಾರೆ.

ಶ್ರೆಷ್ಠ ಕವಿ, ವಿಮರ್ಶಕ, ಅನುವಾದಕರಾಗಿದ್ದ ಅವರು, ಅನೇಕ ಬಾರಿ ನಮ್ಮೊಡನೆ ವೇದಿಕೆ ಹಂಚಿಕೊಂಡಿದ್ದರು. ನವ್ಯ ದಲಿತ ಬಂಡಾಯ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸುತ್ತಿದ್ದರು. 2014ರಲ್ಲಿ ನೆಲಮಂಗಲದ ವನಕಲ್ಲು ಸುಕ್ಷೇತ್ರ ಶಾಖಾ ಮಠದಲ್ಲಿ ಜರುಗಿದ ಶರಣ ಸಂಸ್ಕೃತಿ ಉತ್ಸವದಲ್ಲಿ ವನಕಲ್ಲು ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಮತ್ತೊಂದು ಶಾಖಾಮಠ ಅಥಣಿ ಗಚ್ಚಿನ ಮಠದಲ್ಲಿ 2017ರಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದ ಉದ್ಘಾಟನೆಯನ್ನು ಮಾಡಿದ್ದರು ಎಂದು ಸ್ಮರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net