ಕವಿಗೋಷ್ಠಿಗೆ ಸಹ್ಯಾದ್ರಿ ಆಯ್ಕೆ

Yogeesh Sahyadri
Published on

ಚಿತ್ರದುರ್ಗ: ಕಲಬುರಗಿಯಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿಗೆ ನಗರದ ಆಸ್ಕರ್ ಶಾಲೆ ಪ್ರಾಂಶುಪಾಲ ಯೋಗೀಶ್ ಸಹ್ಯಾದ್ರಿ ಆಯ್ಕೆಯಾಗಿದ್ದಾರೆ.

ಸಮ್ಮೇಳನದ 3ನೇ ದಿನ ಬೆಳಗ್ಗೆ 10 ಗಂಟೆಗೆ ಸಮಾನಾಂತರ ವೇದಿಕೆ-2ರಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಯೋಗೀಶ್ ಸ್ವರಚಿತ ಕವನ ವಾಚಿಸಲಿದ್ದಾರೆ ಎಂದು ಕಸಾಪ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net