

ಚಿತ್ರದುರ್ಗ: ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ತುರ್ತು ಕಾರ್ಯನಿಮಿತ್ತ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ತೆರಳ ಬಯಸುವವರಿಗೆ ಇ-ಪಾಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಂತ ಮದುವೆ, ವೈದ್ಯಕೀಯ ತುರ್ತು ಹಾಗೂ ಅಂತಿಮ ಸಂಸ್ಕಾರಕ್ಕೆ ತೆರಳುವಂಥವರಿಗೆ ಇ-ಪಾಸ್ ವಿತರಿಸಲಾಗುವುದು.
ಇದಕ್ಕಾಗಿ ಏ.23ರಿಂದ ಇ-ಪಾಸ್ ಪೋರ್ಟಲ್ ಆರಂಭಿಸಲಾಗಿದೆ. ಆದರೆ ಪರಸ್ಥಳಕ್ಕೆ ಹೋಗಿ ಬಂದ ಎಲ್ಲರಿಗೂ ಹೋಂ ಕ್ವಾರಂಟೈನ್ ಕಡ್ಡಾಯವೆಂದರು.
ಅಗತ್ಯವುಳ್ಳವರು ಠಿಠಿ:/್ಚಟಜಿ19ಠ್ಚಜಿಠ್ಟಿಛ್ಠ್ಟಜ.್ಚಟಞ ಮೂಲಕ ಅರ್ಜಿ ಸಲ್ಲಿಸಬೇಕು. ಗುರುತಿನ ಚೀಟಿ, ಪ್ರಯಾಣದ ಕಾರಣ, ಪೂರಕ ದಾಖಲೆ ಕೊಟ್ಟು ಒಂದೇ ದಿನದಲ್ಲಿ ಇ-ಪಾಸ್ ಪಡೆಯಬಹುದು. ಸಾರ್ವಜನಿಕರ ಅನಗತ್ಯ ಓಡಾಟ ತಪ್ಪಿಸಲು ಈ ಸೌಲಭ್ಯ ಕಲ್ಪಿಸಲಾಗಿದೆ.
ತುರ್ತು ವೈದ್ಯಕೀಯ ಚಿಕಿತ್ಸೆ, ಮದುವೆ ಹಾಗೂ ಶವ ಸಂಸ್ಕಾರಕ್ಕೆ ಕುಟುಂಬದ ಗರಿಷ್ಠ 4 ಜನ ತೆರಳಬಹುದು. ಅರ್ಜಿ ಸಲ್ಲಿಸಿದ ತಕ್ಷಣ ಜನರೇಟ್ ಆಗುವ ಅಪ್ಲಿಕೆಂಟ್ ಐಡಿಯನ್ನು ಜೋಪಾನವಾಗಿ ಬರೆದಿಟ್ಟುಕೊಳ್ಳ ಬೇಕು.
ಪಾಸ್ ಸಿಗುತ್ತಿದ್ದಂತೆ ಮುದ್ರಿತ ರೂಪದಲ್ಲಿ ಅಥವಾ ಮೊಬೈಲ್‌ನಲ್ಲಿ ಡೌನ್ ಮಾಡಿಟ್ಟುಕೊಳ್ಳ ಬೇಕು. ಅರ್ಜಿ ಜತೆ ಸಲ್ಲಿಸಿರುವ ಗುರುತು ಚೀಟಿಯನ್ನೂ ಪ್ರಯಾಣದ ವೇಳೆ ಹೊಂದಿರಬೇಕೆಂದರು.
ಕೃಷಿ, ತೋಟಗಾರಿಕೆ ಚಟುವಟಿಕೆ ಕೈಗೊಳ್ಳುವ ರೈತರಿಗೆ ಯಾವುದೇ ಪಾಸ್ ಅಗತ್ಯವಿಲ್ಲ. ಸರ್ಕಾರಿ,ಅರೆ ಸರ್ಕಾರಿ, ಕಾರ್ಖಾನೆ ನೌಕರರು ತಮ್ಮ ಗುರುತಿನ ಚೀಟಿ ತೋರಿಸಿ ಕೆಲಸಕ್ಕೆ ತೆರಳಬಹುದು. ಆದರೆ ಅನವಶ್ಯಕವಾಗಿ ರಸ್ತೆಗಳಲ್ಲಿ ಸಂಚರಿಸುವಂತಿಲ್ಲ.
ಜಿಲ್ಲೆಯ ಆಂಧ್ರ ಪ್ರದೇಶದ ಗಡಿ ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ವಾಹನ ಅಥವಾ ವ್ಯಕ್ತಿಯ ಗಡಿ ಪ್ರವೇಶ ನಿರ್ಬಂಧಿಸಲಾಗಿದೆ.
ಚಳ್ಳಕೆರೆ ತಾಲೂಕು ಜಾಜೂರಿನ 10 ಜನರಿಗೆ ಒಂದು ವಾರದ ಬಳಿಕ ಮತ್ತೊಮ್ಮೆ ಗಂಟಲುದ್ರವ ಮತ್ತು ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಿಸಲಾಗುವುದು.
ಜಿಲ್ಲೆಯಲ್ಲಿರುವ 60 ವರ್ಷ ವಯಸ್ಸು ಮೀರಿದವರು, ಅಸ್ತಮಾ, ರಕ್ತದೊತ್ತಡ, ಮಧುಮೇಹ, ಎಚ್‌ಐವಿ, ಕ್ಯಾನ್ಸರ್ ರೋಗಿಗಳು ಹಾಗೂ ಗರ್ಭಿಣಿಯರ ಆರೋಗ್ಯದ ಕುರಿತು ನಿಗಾ ವಹಿಸಲಾಗುತ್ತಿದೆ ಎಂದರು.
ಲಾಕ್‌ಡೌನ್ ಸಡಿಲಗೊಳಿಸಿರುವ ಈ ಸಂದರ್ಭದಲ್ಲಿ ನಗರ ಹಾಗೂ ಗ್ರಾಮೀಣ ಭಾಗದ ಸಣ್ಣ ಸಣ್ಣ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕುವ ಮೂಲಕ ಜನರ ಅನಗತ್ಯ ಓಡಾಟ,ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಎಸ್ಪಿ ಜಿ.ರಾಧಿಕಾ ತಿಳಿಸಿದರು. ಎಡಿಸಿ ಸಿ.ಸಂಗಪ್ಪ ಇದ್ದರು.
ಒಂದು ತಿಂಗಳಿನಿಂದ ಹೊಸ ಪ್ರಕರಣವಿಲ್ಲ: ಜಿಲ್ಲೆ ಸದ್ಯ ಕರೊನಾ ಮಹಾಮಾರಿ ಭೀತಿಯಿಂದ ದೂರವಾಗುತ್ತಿದ್ದು, ಮಾ.24ರಂದು ಪತ್ತೆಯಾಗಿದ್ದ ಒಂದು ಪಾಸಿಟಿವ್ ಪ್ರಕರಣ ಹೊರತು ಪಡಿಸಿ ಈವರೆಗೆ ಮತ್ತೊಂದು ಪ್ರಕರಣ ಗೋಚರಿಸದೇ ಇರುವುದು ಜಿಲ್ಲೆಯ ಜನರಲ್ಲಿ ನೆಮ್ಮದಿ ಮೂಡಿಸಿದೆ.
ಏಳು ಸುತ್ತಿನ ಕೋಟೆ ಚಿತ್ರದುರ್ಗವನ್ನು ಓಬವ್ವ ಕಾಪಾಡಿದಳು ಎಂಬ ಇತಿಹಾಸವನ್ನು ಓದಿದ್ದೇವೆ. ಈಗ ಈ ನಾಡು ಮಹಿಳಾ ಅಧಿಕಾರಿಗಳು ಹಾಗೂ ವೈದ್ಯರ ರಕ್ಷಣೆಯಲ್ಲಿ ಸೇಫ್ ಆಗುತ್ತಿದೆ. ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ, ಎಸ್ಪಿ ಜಿ.ರಾಧಿಕಾ, ಜಿಪಂ ಸಿಇಒ ಎಸ್.ಹೊನ್ನಾಂಬ ಮತ್ತಿತರ ಪ್ರಮುಖ ಇಲಾಖೆಗಳ ಮಹಿಳಾ ಹಿರಿಯ ಅಧಿಕಾರಿಗಳು.
ರೋಡಿಗಿಳಿದ ಡಿಸಿ, ಎಸ್ಪಿ: ಅಗತ್ಯ ಸೇವೆಗಳಿಗೆ ಲಾಕ್‌ಡೌನ್ ಸಡಿಲಗೊಳಿಸಿದ ಬೆನ್ನಲ್ಲೇ ದುರ್ಗದಲ್ಲಿ ಜನರ ಮನಸೋ ಇಚ್ಛೆ ಓಡಾಟಕ್ಕೆ ಕಡಿವಾಣ ಹಾಕುವ ಸಲುವಾಗಿ ಡಿಸಿ, ಎಸ್ಪಿ ಗುರುವಾರ ಕನಕ ವೃತ್ತ ಸೇರಿ ನಗರದ ವಿವಿಧೆಡೆ ಸಂಚಾರ ನಡೆಸಿ ವಾಹನಗಳ ತಪಾಸಣೆ ನಡೆಸಿದರು. ಕೆಲ ರಾಜಕೀಯ ಪಕ್ಷಗಳ ಪ್ರಮುಖರ ಸಹಿತ ಅನೇಕರ ಪಾಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನ ಚಾಲಕರಿಗೆ ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ. ಲಾಕ್‌ಡೌನ್ ಉಲ್ಲಂಘಿಸಿದ ಆರೋಪದಡಿ ಜಿಲ್ಲಾದ್ಯಂತ ಈವರೆಗೆ 445 ಪ್ರಕರಣಗಳನ್ನು ದಾಖಲಿಸಿ, 1179 ಜನರನ್ನು ಬಂಧಿಸಲಾಗಿದೆ. 721 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಜನ, ವಾಹನ ನಿಯಂತ್ರಣಕ್ಕೆ ಡ್ರೋನ್ ಬಳಕೆ: ಅನಗತ್ಯವಾಗಿ ಓಡಾಡುವಂಥವರ ಮೇಲೆ ನಿಗಾ ಇಡಲು ಡ್ರೋನ್ ಕ್ಯಾಮರಾ ಬಳಸಲು ಪೊಲೀಸ್ ಇಲಾಖೆ ಮುಂದಾಗಿದೆ. ಏ.24ರ ಬೆಳಗ್ಗೆ 7 ಗಂಟೆ ನಗರದ ವಿಜ್ಞಾನ ಕಾಲೇಜು ಮೈದಾನದಿಂದ ಹಾರಾಟ ನಡೆಯಲಿದೆ. ಇದರಿಂದಾಗಿ ವಾಹನಗಳ ಹಾಗೂ ಜನರ ಅನಗತ್ಯ ಓಡಾಟ ಪತ್ತೆ ಆಗಲಿದೆ.
12 ಜನರ ಸ್ಯಾಂಪಲ್ಸ್ ಸಂಗ್ರಹ
ಕರೊನಾ ಸೋಂಕಿನ ಪರೀಕ್ಷೆಗಾಗಿ ಜಿಲ್ಲೆಯಲ್ಲಿ ಗುರುವಾರ 12 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ಈವರೆಗೆ ಜ್ವರ ತಪಾಸಣೆಗೆ ಒಳಗಾದವರ ಸಂಖ್ಯೆ 8816 ಹಾಗೂ ಸ್ಕ್ರೀನಿಂಗ್‌ಗೆ ಒಳಗಾದವರ ಸಂಖ್ಯೆ 31065ಕ್ಕೆ ಏರಿದೆ.
28 ದಿನದ ಅವಲೋಕನ ಪೂರ್ಣ-296
14 ದಿನದ ಅವಲೋಕನ ಪೂರ್ಣ-310
ಸಾಂಸ್ಥಿಕ ಕ್ವಾರಂಟೈನ್‌ಗಳಲ್ಲಿರುವವರ ಸಂಖ್ಯೆ-15
ಪರೀಕ್ಷೆಗೆ ಸಂಗ್ರಹಿಸಿದ್ದ ಒಟ್ಟು ಮಾದರಿ-447
ನೆಗೆಟಿವ್ ವರದಿಗಳು -390
ಬರ ಬೇಕಿರುವ ಪರೀಕ್ಷೆ ವರದಿ ಸಂಖ್ಯೆ-36