ಪತ್ರಕರ್ತರಿಗೂ ವಿಮೆ ವಿಸ್ತರಿಸಿ

ctd 14 vime
Published on

ಚಿತ್ರದುರ್ಗ: ಕರೊನಾ ವಿರುದ್ಧ ಹೋರಾಟದಲ್ಲಿ ಮಾಧ್ಯಮದವರೂ ಜೀವದ ಹಂಗು ತೊರೆದು ಹೋರಾಡುತ್ತಿದ್ದು, ಇವರನ್ನು ವಿಮೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಪತ್ರಕರ್ತರು ಒತ್ತಾಯಿಸಿದರು.

ಜಿಲ್ಲಾ ಪತ್ರಿಕೆಗಳ ಸಂಪಾದಕರ ಸಂಘದ ನೇತೃತ್ವವದಲ್ಲಿ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಸರ್ಕಾರಿ ಜಾಹಿರಾತು ಬಾಕಿ, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಪ್ರೋತ್ಸಾಹ ರೂಪದಲ್ಲಿ ಜಾಹಿರಾತು ಬಿಡುಗಡೆಗೆ ತಕ್ಷಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಲಾಕ್‌ಡೌನ್‌ನಿಂದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳು ಆರ್ಥಿಕ ಸಂಕಷ್ಟದಿಂದ ತತ್ತರಿಸಿ, ಚೇತರಿಸಿಕೊಳ್ಳಲಾಗದಂಥ ಸ್ಥಿತಿಗೆ ಸಿಲುಕಿವೆ. ಜತೆಗೆ ಪತ್ರಕರ್ತರನ್ನು ಕರೊನಾ ವಾರಿಯರ್ಸ್ ಎಂದು ಸರ್ಕಾರ ಹೇಳುತ್ತಿದೆ. ಅದರೆ, ಸೌಲಭ್ಯ ಮಾತ್ರ ಇಲ್ಲದಂತಾಗಿದೆ. ಆದ್ದರಿಂದ ಮಾಧ್ಯಮದವರಿಗೂ ವಿಮೆ ವಿಸ್ತರಿಸಬೇಕೆಂದು ಮನವಿ ಮಾಡಿದರು.

ಸಂಘದ ಅಧ್ಯಕ್ಷ ಜಿ.ಓ.ಎನ್.ಮೂರ್ತಿ, ಕಾರ್ಯದರ್ಶಿ ಎಸ್.ಟಿ.ನವೀನ್‌ಕುಮಾರ್, ಖಜಾಂಚಿ ಗೊಂಡಬಾಳ್ ಬಸವರಾಜ್,ನಿರ್ದೇಶಕರಾದ ಎಸ್.ಶ್ರೀನಿವಾಸ್, ಜಯಶೀಲಾ ವಿಜಯಕುಮಾರ್, ಮಮತಾ, ಕೆ.ಸಿ.ನಾಗೇಶ್, ಸಿ.ಕೆ.ಮಧು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net