ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ

DC VINOTH PRIYA (1)
Published on

ಚಿತ್ರದುರ್ಗ: ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಜಿಲ್ಲೆಯ 12 ಜನ ಅಧಿಕಾರಿ, ಸಿಬ್ಬಂದಿ ಆಯ್ಕೆಯಾಗಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ರಾಜಾನಾಯ್ಕ, ಸಮಾಜ ಕಲ್ಯಾಣಾಧಿಕಾರಿ ಟಿ.ನಾಗರಾಜ, ಹೊಸದುರ್ಗದ ಪರಿಸರ ಇಂಜಿನಿಯರ್ ತಿಮ್ಮರಾಜು, ಬಿಸಿಎಂ ವಿಸ್ತರಣಾಧಿಕಾರಿ ಕೆ.ಸಿ.ಶಶಿಧರ್, ನನ್ನಿವಾಳದ ಪಿಡಿಒ ಇನಾಯತ್ ಬಾಷಾ, ಜಿಲ್ಲಾಧಿಕಾರಿ ಕಚೇರಿ ಆರ್‌ಎಚ್‌ಎ ಸಂತೋಷ್ ಕುಮಾರ್, ಪಿಆರ್‌ಇಡಿ ವಿಭಾಗದ ಸ್ಟೆನೊ ಶಕುಂತಲಾಬಾಯಿ, ಕಾರ್ಮಿಕ ಇಲಾಖೆ ಟೈಪಿಸ್ಟ್ ಟಿ.ಉಮಾಲತಾ, ಕೋನಸಾಗರದ ವಿಎ ಉಮೇಶ್, ಶಿಕ್ಷಣ ಇಲಾಖೆ ಮ್ಯಾನೇಜರ್ ಕುಲದೀಪ್, ಚಿತ್ರದುರ್ಗ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಸಿ.ಸರಳಾ ಆಯ್ಕೆಯಾಗಿದ್ದಾರೆ.

ಇದೇ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಭಾರತಿ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮುರುಘ ರಾಜೇಂದ್ರ ಕ್ರೀಡಾಂಗಣದಲ್ಲಿ ಭಾನುವಾರ ಜರುಗಲಿರುವ ಗಣರಾಜ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಡಿಸಿ ಆರ್.ವಿನೋತ್ ಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net