ಜಿಪಂ ಸ್ಥಾಯಿ ಸಮಿತಿಗೆ ಆಯ್ಕೆ

CTD ZP 22 (1)
Published on

ಚಿತ್ರದುರ್ಗ: ಜಿಪಂ ಐದು ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಕ್ಕೆ ಸೋಮವಾರ ಅವಿರೋಧ ನಡೆಯಿತು.

ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಚುನಾವಣೆ ನಿಗದಿಯಾಗಿತ್ತು. ಐದರಲ್ಲಿ ಎರಡು ಸಮಿತಿಗಳಿಗೆ ತಲಾ ಆರು, ಉಳಿದ ಮೂರು ಸಮಿತಿಗಳಿಗೆ ತಲಾ ಏಳು ಸದಸ್ಯ ಸ್ಥಾನಗಳಿಗೆ ಜಿಪಂ ಸದಸ್ಯರು ನಾಮಪತ್ರ ಸಲ್ಲಿಸಿದ್ದರು.

ಈ ಸ್ಥಾನಗಳಿಗೆ ಯಾರೊಬ್ಬರು ಪ್ರತಿಸ್ಪರ್ಧಿಗಳಾಗಿ ನಾಮಪತ್ರ ಸಲ್ಲಿಸದ ಕಾರಣಕ್ಕೆ ಚುನಾವಣಾಧಿಕಾರಿ ಆಗಿದ್ದ ಜಿಪಂ ಮುಖ್ಯಯೋಜನಾಧಿಕಾರಿ ಟಿ.ಶಶಿಧರ್, ಅವಿರೋಧ ಆಯ್ಕೆ ಪ್ರಕಟಿಸಿದರು.

ಹಣಕಾಸು, ಲೆಕ್ಕಪರಿಶೋಧನೆ ಮತ್ತು ಯೋಜನೆ, ಸಾಮಾನ್ಯ, ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಆರೋಗ್ಯ ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಗಳಿಗೆ ಹೊಸ ಸದಸ್ಯರ ಆಯ್ಕೆ ನಡೆದಿದ್ದು, ಹಣಕಾಸು ಸಮಿತಿಗೆ ಜಿಪಂ ಅಧ್ಯಕ್ಷರು, ಸಾಮಾನ್ಯ ಸ್ಥಾಯಿ ಸಮಿತಿಗೆ ಜಿಪಂ ಉಪಾಧ್ಯಕ್ಷರು ಪದನಿಮಿತ್ತ ಅಧ್ಯಕ್ಷರಾಗಿತ್ತಾರೆ.

ಉಳಿದ ಸಮಿತಿಗಳಿಗೆ ಇನ್ನು ಕೆಲವೇ ಕ್ಷಣದಲ್ಲಿ ಅಧ್ಯಕ್ಷರ ಹೆಸರನ್ನು ನೀಡುವುದಾಗಿ ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ತಿಳಿಸಿದ್ದರ ಮೇರೆಗೆ ಸದಸ್ಯರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಶಶಿಧರ್ ಪ್ರಕಟಿಸಿದರು.

ಕಾಂಗ್ರೆಸ್ ಆಡಳಿರೂಢ ಜಿಪಂ ಸ್ಥಾಯಿ ಸಮಿತಿಯಲ್ಲಿ ಈ ಬಾರಿ ಧರ್ಮಪುರ ಕ್ಷೇತ್ರದ ಜೆಡಿಎಸ್ ಸದಸ್ಯೆ ತ್ರಿವೇಣಿ ಶಿವಪ್ರಸಾದ ಗೌಡ ಅವರಿಗೆ ಸ್ಥಾನ ಲಭ್ಯವಾಗಿದೆ.

ಉಪಾಧ್ಯಕ್ಷೆ ಎನ್.ಪಿ.ಸುಶೀಲಮ್ಮ, ಸಿಇಒ ಟಿ.ಯೋಗೇಶ್, ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ ಮತ್ತಿತರರಿದ್ದರು.

ಸಮಿತಿ ಹೆಸರು-ಅಧ್ಯಕ್ಷರ ಹೆಸರು
ಹಣಕಾಸು, ಲೆಕ್ಕಪರಿಶೋಧನೆ-ಜಿಪಂ ಅಧ್ಯಕ್ಷೆ ಶಶಿಕಲಾ
ಸಾಮಾನ್ಯ-ಜಿಪಂ ಉಪಾಧ್ಯಕ್ಷೆ ಎನ್.ಪಿ.ಸುಶೀಲಮ್ಮ
ಸಾಮಾಜಿಕ ನ್ಯಾಯ-ಆರ್.ನರಸಿಂಜರಾಜ
ಶಿಕ್ಷಣ ಮತ್ತು ಆರೋಗ್ಯ-ತ್ರಿವೇಣಿ ಜಿ.ಶಿವಪ್ರಸಾದ್‌ಗೌಡ
ಕೃಷಿ ಮತ್ತು ಕೈಗಾರಿಕೆ-ಕೌಸಲ್ಯಾ ತಿಪ್ಪೇಸ್ವಾಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net