ಹಣ ಹಿಂಪಡೆವ ವದಂತಿ ಸುಳ್ಳು

CTD 16 KGB
Published on

ಚಿತ್ರದುರ್ಗ: ಕರೊನಾ ಹಿನ್ನೆಲೆಯಲ್ಲಿ ಮಹಿಳೆಯರ ಜನಧನ ಖಾತೆಗೆ ಕೇಂದ್ರ ಸರ್ಕಾರ ಜಮೆ ಮಾಡಿದ 500 ರೂ. ಗಳನ್ನು ಹಿಂಪಡೆಯಲಾಗುತ್ತದೆ ಎಂಬ ವದಂತಿ ನಂಬದಂತೆ ಲೀಡ್ ಬ್ಯಾಂಕ್ ಮ್ಯಾನೇಜರ್ ಲಿಂಗೇಗೌಡ ಗ್ರಾಹಕರಿಗೆ ಮನವಿ ಮಾಡಿದ್ದಾರೆ.

ಜನಧನ ಖಾತೆಗೆ ಜಮಾ ಆದ ಮೊತ್ತವನ್ನು ಗ್ರಾಹಕರು ಪಡೆಯಲು ಯಾವುದೇ ಕಾಲಮಿತಿಯನ್ನೂ ನಿಗದಿ ಪಡಿಸಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಂಡು ಯಾವಾಗಲಾದರೂ ಹಣ ಪಡೆಯಬಹುದು.

ಎಟಿಎಂ ಕಾರ್ಡ್ ಬಳಸಿ ಕೂಡ ಬಿಡಿಸಿಕೊಳ್ಳಬಹುದು.ಗ್ರಾಹಕರು ನಗದು ವ್ಯವಹಾರವನ್ನು ತಮ್ಮ ಸಮೀಪದ ಸೇವಾ ಕೇಂದ್ರ ಅಥವಾ ಗ್ರಾಮದಲ್ಲಿರುವ ವ್ಯವಹಾರ ಪ್ರತಿನಿಧಿಗಳ ಮೂಲಕ ನಡೆಸುವಂತೆ ಕೋರಿದ್ದಾರೆ.

ಮೊಬೈಲ್ ಎಟಿಎಂ: ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬ್ಯಾಂಕಿನ ಮೊಬೈಲ್ ಎಟಿಎಂ ಸವಲತ್ತು ಪಡೆಯುವಂತೆ ಚಿತ್ರದುರ್ಗ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಎನ್.ಪಾಂಡುರಂಗಯ್ಯ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net