ಅಯ್ಯಪ್ಪಸ್ವಾಮಿ ಲಕ್ಷ ದೀಪೋತ್ಸವ

ayappa download
Published on

ಚಿತ್ರದುರ್ಗ: ಮೆದೇಹಳ್ಳಿ ರಸ್ತೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಜ.15ರ ಸಂಜೆ 5.30ಕ್ಕೆ 20ನೇ ವರ್ಷದ ಲಕ್ಷ ದೀಪೋತ್ಸವ ಆಯೋಜಿಸಲಾಗಿದೆ.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ತುಮಕೂರಿನ ಅಯ್ಯಪ್ಪಸ್ವಾಮಿ ಸೇವಾ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ಟ್ರಸ್ಟ್ ಅಧ್ಯಕ್ಷ ಶರಣ್ ಕುಮಾರ್, ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತ ರೆಡ್ಡಿ, ಗ್ರಾಪಂ ಅಧ್ಯಕ್ಷ ಉಜ್ಜಿನಿ ಸ್ವಾಮಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಟಿ.ಮಹಾಂತೇಶ, ಬೆಂಗಳೂರಿನ ಶಬರಿಮಲೆ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ಅಧ್ಯಕ್ಷ ಕೆ.ಕೃಷ್ಣಪ್ಪ, ಉದ್ಯಮಿಗಳಾದ ಅರುಣ್ ಕುಮಾರ್, ಬಿ.ಎಸ್.ವಿರುಪಾಕ್ಷಪ್ಪ, ದೇವರಾಜ ಅರಸು ಎಜುಕೇಷನಲ್ ಸೊಸೈಟಿ ಸಿಇಒ ರಘುಚಂದನ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net