ಕವನದ ಮೂಲಕ ಶರಣರಿಂದ ಕರೊನಾ ವಿಶ್ಲೇಷಣೆ

MURUGA SWAMIJI
Published on

ಚಿತ್ರದುರ್ಗ: ಕರೊನಾ ಸೋಂಕು ಭೀತಿಯ ಹಿನ್ನೆಲೆಯಲ್ಲಿ ಈ ತಿಂಗಳ ಅಂತ್ಯದವರೆಗಿನ ಎಲ್ಲ ಕಾರ್ಯಕ್ರಮ ರದ್ದು ಮಾಡಿರುವುದಾಗಿ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸ್ವರಚಿತ ಕವನವನ್ನು ವಾಚಿಸುವ ಮೂಲಕ ಕರೊನಾದಿಂದ ಉಂಟಾಗಿರುವ ಪರಿಸ್ಥಿತಿಯನ್ನು ವಿಶ್ಲೇಷಿಸಿದರು.

ಆರೋಗ್ಯ ಮುಖ್ಯ. ಆದ್ದರಿಂದ ಜಾತ್ರೆ, ಸಮಾರಂಭಗಳಿಂದ ಜನರು ಸ್ವಯಂ ನಿಬರ್ಂಧ ಹಾಕಿಕೊಂಡು ಮನೆಯಲ್ಲೇ ಉಳಿಯ ಬೇಕು. ಜನವರಿಯಿಂದ ಈವರೆಗೂ 110ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ನಾವು, ಈಗ ಯಾವುದೇ ಸಭೆ, ಸಮಾರಂಭ, ಜಾತ್ರೆಗಳಲ್ಲಿ ಭಾಗವಹಿಸುತ್ತಿಲ್ಲ. ಮಾ.21ರಂದು ಏರ್ಪಡಿಸಿದ್ದ ಅಭಿನಂದನಾ ಸಮಾರಂಭ, ಯುಗಾದಿ ಕವಿಗೋಷ್ಠಿ ಮುಂದೂಡಿದ್ದೇವೆ ಎಂದರು.

ಭಾರತೀಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು. ಕಾಯಿಲೆ ಬಂದ ಸಂದರ್ಭದಲ್ಲಿ ಉಂಟಾಗುವ ಯಾತನೆ ತಡೆದುಕೊಳ್ಳಬೇಕಾಗುತ್ತಿದೆ. ಕಾಯಿಲೆಗಳಿಗೆ ಅಂಜುವ ಅಗತ್ಯವಿಲ್ಲ. ಆದರೆ, ಸರ್ಕಾರದ ನಿರ್ದೇಶನದಂತೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಬೇಕು.

ಕರೊನಾದೆಡೆ ಅಲಕ್ಷೃ ಬೇಡ, ನಿರ್ಲಕ್ಷೃ ವಹಿಸಿದರೆ ಪ್ರಾಣಕ್ಕೆ ಅಪಾಯ ಎಂಬುದನ್ನು ಅರಿಯಬೇಕೆಂದ ಶರಣರು, ‘ಹೆದರಿದರು ಆಧುನಿಕ ಮಾನವ, ಕಂಗೆಡದಿರು ಎಲವೊ ಜೀವ ಎಂಬ ಕವನದಲ್ಲಿ ಸದ್ಯ ಜನರ ಸಂಕಷ್ಟವನ್ನು ಎಳೆ, ಎಳೆಯಾಗಿ ಬಿಡಿಸಿಟ್ಟರು.‘ನಾವು ವಾಸಿಸುತ್ತಿರುವುದು ಏಷ್ಯ ಖಂಡಕೆ ಸೇರಿದ ಭವ್ಯ ಭಾರತದಲ್ಲಿ, ಪ್ರಾಚೀನ ಸಂಸ್ಕೃತಿ, ಆಹಾರ, ವಿಜ್ಞಾನ, ವೈದ್ಯಕೀಯ ಜೀವನ ಪದ್ಧತಿಯಲ್ಲಿ. ಸಮಭಾಜಕ ರೇಖೆಯು ಹಾಯ್ದು ಹೋಗಿರುವ ಉಷ್ಣವಲಯದಲ್ಲಿ, ರೋಗ ನಿರೋಧಕ ಶಕ್ತಿಯು ನಮ್ಮೊಳಗೆ ಇರುವಾಗ ಭಯವು ಇನ್ನೆಲ್ಲಿ’ ಎಂದು ಪ್ರಶ್ನಿಸುವ ಮೂಲಕ ಶರಣರು ತಮ್ಮ ಕವನವನ್ನು ಪೂರ್ಣಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net