

ಚಿತ್ರದುರ್ಗ: ಭಾರತೀಯ ಸಂಸ್ಕೃತಿಗೆ ಅಪಚಾರ ಮಾಡುವಂಥ ಪ್ರೇಮಿಗಳ ದಿನವನ್ನು ಆಚರಿಸದಂತೆ ಹಿಂದು ಯುವಸೇನೆ ಜಿಲ್ಲಾಧ್ಯಕ್ಷ ಎನ್.ಇ.ನಾಗರಾಜ್ ಯುವ ಜನರಲ್ಲಿ ಮನವಿ ಮಾಡಿದ್ದಾರೆ.
ಸುಸಂಸ್ಕೃತ ದೇಶದಲ್ಲಿ ವಿದೇಶಿ ಸಂಸ್ಕೃತಿ ವ್ಯಾಲೆಂಟ್ಯನ್ಸ್ ಡೇ ಆಚರಣೆ ಬೇಡ. ಇದರ ಹೆಸರಲ್ಲಿ ಅಸಂಬದ್ಧವಾಗಿ ವರ್ತಿಸದೆ ಭಾರತೀಯ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಕೋರಿದ್ದಾರೆ.