ವಾರ್ಷಿಕ ಶಿಬಿರ ಸಮಾರೋಪ

SP_Dr_ARUN_K
Published on

ಚಿತ್ರದುರ್ಗ: ಜಿಲ್ಲಾ ಗೃಹರಕ್ಷಕ ದಳದ ವಾರ್ಷಿಕ ಮೂಲ ಶಿಬಿರದ ಸಮಾರೋಪ ಸಮಾರಂಭ ಜ.11ರಂದು ಮಧ್ಯಾಹ್ನ 3.30ಕ್ಕೆ ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ನಡೆಯಲಿದೆ.

ಅಂದು ಜಿಲ್ಲಾದ್ಯಂತ ಆಗಮಿಸುವ ಗೃಹರಕ್ಷಕ ದಳದವರಿಂದ ಪಥಸಂಚಲನ ಹಾಗೂ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ.

ಎಸ್ಪಿ ಡಾ.ಕೆ.ಅರುಣ್, ಎಎಸ್ಪಿ ಎಂ.ಬಿ.ನಂದಗಾವಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಶಿಧರ್ ಎಸ್.ನೀಲೇಗಾರ್ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಸಿ.ಕೆ.ಸಂಧ್ಯಾ ಅಧ್ಯಕ್ಷತೆ ವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net