ಉದಯ ನರ್ಸಿಂಗ್ ಹೋಂಗೆ 25ನೇ ವರ್ಷದ ಸಂಭ್ರಮ

UDAYA HOSPITAL
Published on

ಚಿತ್ರದುರ್ಗ: ಚಿತ್ರದುರ್ಗದ ಪ್ರತಿಷ್ಠಿತ ಉದಯ ನರ್ಸಿಂಗ್ ಹೋಮ್ ಸಾರ್ಥಕ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬುಧವಾರ ಆಸ್ಪತ್ರೆಯಲ್ಲಿ ಬೆಳ್ಳಿ ಮಹೋತ್ಸವ ಆಚರಿಸಿಕೊಂಡಿತು.

ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಜತೆ ಚಿತ್ರದುರ್ಗದ ಪ್ರಮುಖ ವೈದ್ಯರು, ಗಣ್ಯರು 25ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು.

ಇದೇ ವೇಳೆ ಆಸ್ಪತ್ರೆ ನಡೆದು ಬಂದ ದಾರಿಯನ್ನು ಮೆಲಕು ಹಾಕುವ ಜತೆಗೆ ರೋಗಿಗಳಿಗೆ ಗುಣಮಟ್ಟದ ಸೇವೆ ಒದಗಿಸಲು ಕೈಗೊಂಡ ಕ್ರಮಗಳ ಕುರಿತು ವೈದ್ಯರು ತೃಪ್ತಿ ವ್ಯಕ್ತಪಡಿಸಿದರು.

ಬಸವೇಶ್ವರ ಆಸ್ಪತ್ರೆ ವೈದ್ಯ ಡಾ.ನಾರಾಯಣಮೂರ್ತಿ ಮಾತನಾಡಿ, ಡಾ. ಉದಯ್ ಶೆಟ್ಟಿ ಅವರಂತ ವೈದ್ಯರು ಅಪರೂಪ. ವೃತ್ತಿಯಡೆಗಿನ ಅವರ ಬದ್ಧತೆ ಹಾಗೂ ರೋಗಿಗಳ ಮೇಲೆ ಅವರಿಗಿರುವ ಪ್ರೀತಿ ಅನುಕರಣೀಯ ಎಂದರು.

ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಅವರ ಜತೆ ಕೆಲಸ ಮಾಡಲು ಎಲ್ಲರೂ ಇಷ್ಟಪಡುತ್ತಾರೆ. ಅವರ ಸ್ನೇಹಗುಣ, ಸರಳತೆ ಎಂಥವರಲ್ಲೂ ಆತ್ಮಿಯತೆ ಮೂಡಿಸುತ್ತದೆ ಎಂದು ಪ್ರಶಂಸಿಸಿದರು.

ಆಸ್ಪತ್ರೆ ಸಿಬ್ಬಂದಿಯನ್ನು ಕುಟುಂಬದಂತೆ ನೋಡಿಕೊಳ್ಳುವುದು ಅವರ ದೊಡ್ಡ ಗುಣ. ಜಿಲ್ಲೆಯ ಜನತೆಗೆ ಇವರಿಂದ ಮತ್ತಷ್ಟು ಸೇವೆ ದೊರೆಯಲಿ ಎಂದು ಆಶಿಸಿದರು.

ಡಾ.ಉದಯ ಶೆಟ್ಟಿ ಹಾಗೂ ಪತ್ನಿ ರೋಷ್ನಿ ಯು.ಶೆಟ್ಟಿ, ಸಿಬ್ಬಂದಿ ರೂಬಿ ರೋಸ್ಲಿನ್, ಅಂಜಿನಮ್ಮ, ನಾಗರಾಜ್ ಅವರನ್ನು ಇದೇ ವೇಳೆ ಗಣ್ಯರು ಗೌರವಿಸಿದರು.

ಡಾ.ಎಸ್.ಜಿ.ಶಿವಪ್ರಸಾದ್, ಡಾ.ಎಚ್.ಎಸ್.ಬಸವರಾಜ್, ಡಾ.ಕೆ.ರಾಘವೇಂದ್ರ, ಡಾ.ಶ್ರೀನಿವಾಸ್ ಶೆಟ್ಟಿ, ಡಾ.ಪೃಥ್ವೀಶ, ಡಾ.ನವೀನ್, ಡಾ.ಪ್ರಭಾಕರ್ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್, ನರ್ಸಿಂಗ್ ಹೋಂ ಆಡಳಿತ ವರ್ಗದ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net