ಲಕ್ಷ್ಮೀನರಸಿಂಹ ಜಾತ್ರೆಗೆ ತೆರೆ

CTD HD PUrA 12
Published on

ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಎಚ್.ಡಿ.ಪುರದಲ್ಲಿ ಮಾ.2ರಂದು ಆರಂಭಗೊಂಡಿದ್ದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವ ಹಾಗೂ ಜಾತ್ರಾಮಹೋತ್ಸವ ಗುರುವಾರ ರಾತ್ರಿ ಶಯೊನೋತ್ಸವದೊಂದಿಗೆ ಸಮಾಪನಗೊಂಡಿತು.

ಸಹಸ್ರಾರು ಭಕ್ತರ ಸಮ್ಮುಖದಲ್ಲಿ 9ರಂದು ಬ್ರಹ್ಮರಥೋತ್ಸವ ನಡೆದಿತ್ತು. 10ರ ಮುಂಜಾನೆ ರಥೋತ್ಸವ ಹಾಗೂ ಸ್ವಾಮಿಗೆ ದೊಡ್ಡೆಡೆ ಸೇವೆ, ಭೂತಬಲಿ, ಧೂಳೋತ್ಸವ, ಬೆಳ್ಳಿಪಲ್ಲಕ್ಕಿ ಹಾಗೂ ಚೌಕಿ ಉತ್ಸವ ಅದ್ಧೂರಿಯಿಂದ ಜರುಗಿದ್ದವು.

ಬ್ರಹ್ಮ ರಥೋತ್ಸವ ದಿನದಂದು ಸಾವಿರಾರು ಭಕ್ತರು ಪೂಜೆ, ಹರಕ ಸಲ್ಲಿಸಿದರು. 11ರ ಬೆಳಗ್ಗೆ ಧ್ವಜಾರೋಹಣ, ನವಿಲೋತ್ಸವ ಹಾಗೂ ರಾತ್ರಿ ಅದ್ದೂರಿಯಾಗಿ ಜರುಗಿದ ಹೂವಿನ ಪಲ್ಲಕ್ಕಿ ಮಹೋತ್ಸವ, ಪೀಠೋತ್ಸವ ಮೊದಲಾದ ಧಾರ್ಮಿಕ ಆಚರಣೆಗಳು ಜರುಗಿದವು. ಗುರುವಾರ ಬೆಳಗ್ಗೆ ಸೂರ‌್ಯಮಂಡಲೋತ್ಸವ,ಪೀಠೋತ್ಸವ ಹಾಗೂ ರಾತ್ರಿ ಶಯನೋತ್ಸವದೊಂದಿಗೆ ಜಾತ್ರೆ ಮುಕ್ತಾಯವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net