ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಾರಿಗೆ ವ್ಯವಸ್ಥೆ

RAVISHANKAR REDDY DDPI
Published on

ಚಿತ್ರದುರ್ಗ: ಜೂ.25ರಿಂದ ಜು.3ರ ವರೆಗೆ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸಹಾಯ ವಾಣಿ ಪ್ರಾರಂಭಿಸಲಾಗಿದೆ.

ವಿದ್ಯಾರ್ಥಿಗಳಿಗೆ ಸಾರಿಗೆ ಸೌಕರ್ಯದ ಕುರಿತ ಮಾಹಿತಿಯನ್ನು ಆಯಾ ಪ್ರೌಢಶಾಲೆ ಮುಖ್ಯಸ್ಥರ ಮೂಲಕ ತಿಳಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸ್ಥಾಪಿಸಿರುವ ಸಹಾಯವಾಣಿಯನ್ನು ರಜಾ ದಿನ ಹೊರತುಪಡಿಸಿ ಬೆಳಗ್ಗೆ 10ರಿಂದ ಸಂಜೆ 5.30ರ ವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದೆಂದು ಡಿಡಿಪಿಐ ಕೆ.ರವಿಶಂಕರ ರೆಡ್ಡಿ ತಿಳಿಸಿದ್ದಾರೆ.

ಜಿಲ್ಲಾ ಸಹಾಯವಾಣಿ 08194-222259, ನೋಡಲ್ ಅಧಿಕಾರಿ-9945713933. ತಾಲೂಕಿನ ಸಹಾಯವಾಣಿ ಸಂಖ್ಯೆ ಹಾಗೂ ನೋಡಲ್ ಅಧಿಕಾರಿ ಸಂಖ್ಯೆ. ಚಳ್ಳಕೆರೆ 08195-222296, 9886799923. ಚಿತ್ರದುರ್ಗ 08194-222236, 9620064547. ಹಿರಿಯೂರು 08193-263260,7019451504. ಹೊಸದುರ್ಗ 08199-230225, 8762747132. ಹೊಳಲ್ಕೆರೆ 08191-275223, 7899460068, 9113671933 ಹಾಗೂ ಮೊಳಕಾಲ್ಮೂರು 08198-229242, 9036456532. ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net