

ಚಿತ್ರದುರ್ಗ:ಭಾರತೀಯ ಅಂಚೆ ಇಲಾಖೆ,ಚಿತ್ರದುರ್ಗ ವಿಭಾಗದ ಅಂಚೆ ಈಧಿಕ್ಷಕರ ಕಚೇರಿ ಹಾಗೂ ಚಿತ್ರದುರ್ಗ ಪ್ರಧಾನ ಅಂಚೆ ಕಚೇರಿ ಆಶ್ರಯದಲ್ಲಿ ಅ.9 ರಿಂದ ಅ.13ರವರೆಗೆ ರಾಷ್ಟ್ರೀಯ ಅಂಚೆ ಸಪ್ತಾಹ ಆಯೋಜಿಸಲಾಗಿದೆ.
9ರಂದು ವಿಶ್ವ ಅಂಚೆ ದಿನ,ಅ.10 ರಂದು ವಿತ್ತೀಯ ಸಶಕ್ತೀಕರಣ ದಿನ,11ರಂದು ಅಂಚೆ ಚೀಟಿ ಸಂಗ್ರಹ ದಿನ,12ರಂದು ಟಪಾಲು ಮತ್ತು ಪಾರ್ಸೆಲ್ ದಿನ ಮತ್ತು 13 ರಂದು ಅಂತ್ಯೋದಯ ದಿನವನ್ನು ಆಚರಿಸಲಾಗುತ್ತದೆ.
ಸ್ವಾತಂತ್ರೃ ಅಮತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಸಪ್ತಾಹವನ್ನು ವಿಶೇಷವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಅಂಚೆ ಇಲಾಖೆಯಲ್ಲಿ ದೊರೆಯುವ ಸೇವಾ ಸೌಲಭ್ಯಗಳು, ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವುದರ ಜತೆಗೆ ನಿಗಪಡಿಸಿದ ಗುರಿಗಳನ್ನು ಸಾಸಲು ಕಾರ್ಯ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಅಂಚೆ ಅಧೀಕ್ಷ ಒ.ವಿರುಪಾಕ್ಷಪ್ಪ ತಿಳಿಸಿದ್ದಾರೆ.