ವಾಸವಿ ಕನ್ವೆನ್‌ಷನ್ ಹಾಲ್ ಅನುದಾನ ಭರವಸೆ

CTD SHETTY 06
Published on

ಚಿತ್ರದುರ್ಗ: ಚಳ್ಳಕೆರೆ ರಸ್ತೆಗೆ ಹೊಂದಿಕೊಂಡಿರುವ ನಾಲ್ಕು ಎಕರೆ ಜಮೀನಿನಲ್ಲಿ ಆರ್ಯವೈಶ್ಯ ಸಮುದಾಯದವರು ಸಾರ್ವಜನಿಕ ಉದ್ದೇಶಕ್ಕೆ ನಿರ್ಮಿಸುತ್ತಿರುವ ವಾಸವಿ ಕನ್ವೆನ್‌ಷನ್ ಹಾಲ್ ನಿರ್ಮಾಣಕ್ಕೆ ಶಾಸಕರ ನಿಧಿಯಿದ 10 ಲಕ್ಷ ರೂ. ಅನುದಾನದ ಜತೆಗೆ ಎರಡು ಬೋರ್‌ವೆಲ್ ಹಾಗೂ ಅರಣ್ಯ ಇಲಾಖೆ ಸಹಾಯದಿಂದ ಸಸಿಗಳನ್ನು ನೆಡಿಸಿ ವಾಹನ ನಿಲುಗಡೆಗೆ ನೆರಳಿನ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.

ಸೋಮವಾರ ಕನ್ಯಕಾ ಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ನಿರ್ಮಿಸಲಾದ ವೈಕುಂಠದ್ವಾರ ಉದ್ಘಾಟಿಸಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net