ಜ್ಞಾನ ಪಸರಿಸಿದ ಜಗದ ಮಹಾತ್ಮೆ

SAVITRIBHA PULE
Published on

ಚಿತ್ರದುರ್ಗ: ನಗರದ ವಿ.ಪಿ.ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ 189ನೇ ಜನ್ಮ ದಿನ ಆಚರಿಸಲಾಯಿತು.

ಮುಖ್ಯಶಿಕ್ಷಕ ವೈ.ವೆಂಕಟಾಪತಿ ಮಾತನಾಡಿ, ಬೆಂಕಿ ಎಲ್ಲ ಕಡೆ ಪಸರಿಸಲು ಒಂದು ಕಿಡಿ ಬೇಕು. ಹಾಗೆಯೇ ಜ್ಞಾನವು ಎಲ್ಲ ಕಡೆ ಪಸರಿಸಲು ಕಿಡಿಯಾದ ಜಗದ ಮಹಾತ್ಮೆ ಸಾವಿತ್ರಿಬಾ ಫುಲೆ ಎಂದು ಬಣ್ಣಿಸಿದರು.

ಸಹ ಶಿಕ್ಷಕಿ ಸುಕನ್ಯಾ ಮಾತನಾಡಿ, ಶಿಕ್ಷಣ ರಂಗ ಸೇರಿ ಇತರೆ ಕ್ಷೇತ್ರಗಳಲ್ಲಿ ಮಹಿಳೆಯರು ದಾಪುಗಾಲು ಹಾಕಲು ಸಾವಿತ್ರಿಬಾಯಿ ಫುಲೆ ಅವರೇ ಕಾರಣೀಭೂತರು ಎಂದು ಸ್ಮರಿಸಿದರು.
ದೈಹಿಕ ಶಿಕ್ಷಣ ಶಿಕ್ಷಕ ಕೆ.ಎಚ್.ಶಿವರಾಂ, ಸಹ ಶಿಕ್ಷಕ ಟಿ.ರುದ್ರಮುನಿ, ಸಹ ಶಿಕ್ಷಕಿ ಅಮೀನಾ ಬಿ, ಯಶೋದಾ, ರಾಧಾಮಣಿ, ಸರಸ್ವತಿ, ರಾಜೇಶ್ವರಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net