ಸಕ್ರೆಬೈಲಿಗೆ ತೆರಳಿದ ಮುರುಘಾಮಠದ ಆನೆ

ctd 3 muruga ane (2)
Published on

ಚಿತ್ರದುರ್ಗ : ನಗರದ ಶ್ರೀ ಮುರುಘಾಮಠದ 25 ವರ್ಷದ ಹೆಣ್ಣಾನೆ (ಕನೇನಿ)ಯನ್ನು ಸರ್ಕಾರದ ಅನುಮತಿಯೊಂದಿಗೆ ಸಂತಾನೋತ್ಪತ್ತಿಗಾಗಿ 3 ರಿಂದ 4 ತಿಂಗಳ ಅವಧಿಗೆ ಶಿವಮೊಗ್ಗದ ಸಕ್ರೆಬೈಲು ಆನೆಬಿಡಾರಕ್ಕೆ ಬುಧವಾರ ಅದ್ಧೂರಿಯಾಗಿ ಕಳಿಸಿಕೊಡಲಾಯಿತು. ಡಾ.ಶಿವಮೂರ್ತಿ ಮುರುಘಾ ಶರಣರು ಆನೆಗೆ ಬಾಳೆಹಣ್ಣು, ಬೆಲ್ಲ, ಕಬ್ಬನ್ನು ತಿನ್ನಿಸಿ ಬೀಳ್ಕೊಟ್ಟರು.

ಎಸಿಎಫ್ ಮಂಜುನಾಥ್, ಶಿವಮೊಗ್ಗ ವನ್ಯಜೀವಿ ವಿಭಾಗದ ಡಾ.ವಿನಯ್, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಕೃಷ್ಣಪ್ಪ, ಡಾ.ಪ್ರಸನ್ನಕುಮಾರ್, ಡಾ.ಕುಮಾರ್, ಡಾ.ತಿಪ್ಪೇಸ್ವಾಮಿ, ಎಸ್‌ಜೆಎಂ ವಿದ್ಯಾಪೀಠದ ಕಾರ‌್ಯದರ್ಶಿ ಎ.ಜೆ.ಪರಮಶಿವಯ್ಯ, ಚಿತ್ರದುರ್ಗ ವೀರಶೈವ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಪಟೇಲ್ ಶಿವಕುಮಾರ್ ಹಾಗೂ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net