ಗೃಹರಕ್ಷಕ ದಳದ ಘಟಕ್ಕೆ ಮನವಿ

CHITRAHALLI
Published on

ಚಿತ್ರದುರ್ಗ: ಚಿತ್ರಹಳ್ಳಿ ಗೇಟ್ ಬಳಿ ಗೃಹರಕ್ಷಕದಳದ ಘಟಕ ಆರಂಭಿಸುವಂತೆ ಕಾಶೀಪುರದಲ್ಲಿ ಗುರುವಾರ ಗ್ರಾಮಸ್ಥರು ಜಿಲ್ಲಾ ಹೋಂ ಗಾರ್ಡ್ಸ್ ಕಮಾಂಡೆಂಟ್ ಸಿ.ಕೆ.ಸಂಧ್ಯಾ ಅವರಿಗೆ ಮನವಿ ಸಲ್ಲಿಸಿದರು.

ಕಾಶೀಪುರ ಹಾಗೂ ಈ ಗ್ರಾಮದ ಆಸುಪಾಸು 10 ಸಾವಿರಕ್ಕೂ ಹೆಚ್ಚು ಜನರಿದ್ದು, ಸಾಕಷ್ಟು ಜನರು ವಿದ್ಯಾವಂತರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ ಎಂದು ತಿಳಿಸಿದರು. ಮನವಿ ಸ್ವೀಕರಿಸಿದ ಸಂಧ್ಯಾ ಮಾತನಾಡಿ, ಚಿತ್ರಹಳ್ಳಿ ಗೇಟ್ ಬಳಿ ಘಟಕ ಸ್ಥಾಪನೆಗೆ ಆದ್ಯತೆಯೊಂದಿಗೆ ಶಿಫಾರಸು ಮಾಡುವುದಾಗಿ ತಿಳಿಸಿದರು. ಗೃಹರಕ್ಷಕದಳದ ಜಿಲ್ಲಾ ಬೋಧಕ ಜಿ.ಎಚ್. ಲೋಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net