

ಚಿತ್ರದುರ್ಗ: ಚಂದ್ರಯಾನ-2 ಫೇಲ್ ಆಗಿರುವುದಕ್ಕೆ ಬೇಜರಾಗಬೇಡಿ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರನ್ನು ಸಂತೈಸಿದ ಪ್ರಧಾನಿ ನರೇಂದ್ರ ಮೋದಿ ಅವರು!!
ಚಂದ್ರಯಾನ-3ರ ಯಶಸ್ವಿಗೆ ಹಾರೈಸಿ ಸಹಿ ಹಾಕುವ ಮೂಲಕ ಇಸ್ರೋ ವಿಜ್ಞಾನಿಗಳಿಗೆ ವೀಕ್ಷಕರ ಶುಭ ಹಾರೈಸುವುದು ಒಂದೆಡೆಯಾದರೆ, ಚಿತ್ರದುರ್ಗದ ಏಳು ಸುತ್ತಿನ ಕೋಟೆಯಲ್ಲಿರುವ ಒಂಟಿಕಲ್ಲು ಬಸವಣ್ಣ, ಒನಕೆ ಓಬವ್ವ ಪ್ರತಿಕೃತಿ, ದೀಪಾಲಂಕರ, ಹುಲ್ಲಿನಿಂದ ರಚಿಸಿರುವ ಆನೆ, ಜಿರಾಫೆ ಹಾಗೂ ಕಾರ್ಟೂನ್ ಮೊದಲಾದ ಆಕರ್ಷಕ ಹೂವು, ತರಕಾರಿಗಳಿರುವ 29ನೇ ಫಲಪುಷ್ಪ ಪ್ರದರ್ಶನ ಶುಕ್ರವಾರ ಸಂಜೆ ನಗರದ ವಿಪಿ ಬಡಾವಣೆ ತೋಟಗಾರಿಕೆ ಇಲಾಖೆ ಆವರಣದಲ್ಲಿ ಆರಂಭವಾಯಿತು.
ಜಿಪಂ ಸಿಇಒ ಸಿ.ಸತ್ಯಭಾಮಾ ಹಾಗೂ ಎಸ್ಪಿ ಡಾ.ಕೆ.ಅರುಣ್ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಸಹಿ ಫಲಕಕ್ಕೆ ಅನೇಕ ಗಣ್ಯರು, ವೀಕ್ಷಕರು ಸಹಿ ಹಾಕಿದರು. ಹತ್ತು, ಹಲವು ವೈಶಿಷ್ಟೃಗಳು ವೀಕ್ಷಕರ ಗಮನ ಸೆಳೆಯುತ್ತಿರುವ ಈ ಪ್ರದರ್ಶನ ಜ.31ರಿಂದ ಫೆಬ್ರವರಿಗೆ 2ರ ವರೆಗೆ ನಡೆಯಲಿದೆ.
ವಿವಿಧ ಜಾತಿಯ ಹೂ, ಹಣ್ಣು, ತರಕಾರಿ ಮತ್ತು ಹಲವು ವಿಶೇಷ ಬಗೆಯ ಅಲಂಕಾರಿಕ ಗಿಡಗಳನ್ನು ಬೆಳೆಸಿ ಪ್ರದರ್ಶಿಸಲಾಗುತ್ತಿದೆ. ಫಲ-ಪುಷ್ಪ ಪ್ರದರ್ಶನದಲ್ಲಿ ಹೂವಿನ ಗಿಡಗಳ ಬೃಹತ್ ಪ್ರದರ್ಶನ, ಬೋನ್ಸಾಯ್ (ಕುಬ್ಜ) ಮರಗಳು, ತರಕಾರಿ ಕೆತ್ತನೆ, ಅಲಂಕಾರಿಕ ಗಿಡಗಳು, ಹಣ್ಣು ಮತ್ತು ತರಕಾರಿಗಳಿವೆ.
ತೋಟಗಾರಿಕೆ ಕ್ಷೇತ್ರದ ಮಾದರಿ, ಔಷಧ ಗಿಡಗಳ ಪ್ರದರ್ಶನ ಹಾಗೂ ಚಿತ್ತಾಕರ್ಷಕ ವರ್ಣಗಳ ಆರ್ಕಿಡ್ಸ್, ಪುಷ್ಪ ಸಸಿಗಳು, ವೈವಿಧ್ಯ ಮಯ ಹೂವಿನ, ಹಣ್ಣಿನ ಹಾಗೂ ತರಕಾರಿ ತಳಿಗಳು ನೋಡುಗರ ಕೂತುಹಲ ಮೂಡಿಸುತ್ತಿವೆ.
ತೋಟಗಾರಿಕೆ ಉಪ ನಿರ್ದೇಶಕಿ ಜಿ.ಸವಿತಾ, ಹಿರಿಯ ಸಹಾಯಕ ನಿರ್ದೇಶಕ ಬಿ.ದೇವರಾಜು, ಎಸಿ ವಿ.ಪ್ರಸನ್ನಕುಮಾರ್, ಜಿಲ್ಲಾ ತೋಟಗಾರಿಕೆ ಸಂಘದ ಉಪಾಧ್ಯಕ್ಷ ಎ.ಎಸ್.ಲೋಕನಾಥ್, ನಿರ್ದೇಶಕರಾದ ವೀಣಾ, ಲೀಲಾ, ಮಹಾಂತಮ್ಮ, ಚಿತ್ರದುರ್ಗ ತಾಪಂ ಅಧ್ಯಕ್ಷ ಡಿ.ಎಂ.ಲಿಂಗರಾಜು, ಹಿರಿಯೂರು ತಾಪಂ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಮೊದಲಾದ ಪ್ರಮುಖರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.