ಯತ್ನಾಳ್ ಬಂಧನಕ್ಕೆ ಒತ್ತಾಯ

CTD 26 manavi
Published on

ಚಿತ್ರದುರ್ಗ: ಸ್ವಾತಂತ್ರೃ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಬಸವನಗೌಡ ಯ ತ್ನಾಳ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ, ಬಂಧಿಸುವಂತೆ ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂಘಟನೆ ಪ್ರಮುಖರು ಒತ್ತಾಯಿಸಿದ್ದಾರೆ.

ಬುಧವಾರ ಜಿಲ್ಲಾಧಿಕಾರಿ ಆರ್.ವಿನೋತ್‌ಪ್ರಿಯಾ ಅವರಿಗೆ ಮನವಿ ಸಲ್ಲಿಸಿದ ಸಂಘಟಕರು, ನಾಡಿನ ಜನರು ಇಂದು ಪ್ರಜಾಪ್ರಭುತ್ವದಡಿ ನೆಮ್ಮದಿ ಜೀವನ ನಡೆಸಲು ಸ್ವಾತಂತ್ರ್ಯ ಹೋರಾಟಗಾರ ತ್ಯಾಗ ಕಾರಣ ಎಂದರು.

ಈ ಕಾರಣಕ್ಕೆ ಸೈನಿಕರು, ರೈತರಿಗೆ ಕೊಡುವಷ್ಟೇ ಗೌರವವನ್ನು, ಸ್ವಾತಂತ್ರ್ಯ ಯೋಧರಿಗೂ ದೇಶದ ಜನರು ಕೊಡುತ್ತಿದ್ದಾರೆ. ಆದರೆ, ಯತ್ನಾಳ್ ಸ್ವಾತಂತ್ರೃ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಹೇಳಿಕೆ ನೀಡುವ ಮೂಲಕ ನಾಡಿಗೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.

ಸಮಾಜದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಸ್ವಾರ್ಥ, ದ್ವೇಷ ಮನೋಭಾವನೆ ದೂರಗೊಳಿಸಲು ಶತಾಯುಷಿ ದೊರೆಸ್ವಾಮಿ ಅನೇಕ ಹೋರಾಟಗಳಲ್ಲಿ ಈಗಲೂ ಪಾಲ್ಗೊಳ್ಳುತ್ತಿದ್ದರು. ಹಿರಿಯ ಮುತ್ಸದ್ದಿ ನಾಡಿನ ನಿಜ ಆಸ್ತಿ ಆಗಿದ್ದು, ಇವರ ವಿರುದ್ಧ ಯತ್ನಾಳ್ ಅನಗತ್ಯ ಟೀಕೆ ಮಾಡಿರುವ ಯತ್ನಾಳ್ ಅವರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.

ಅಹಿಂದ ಬಳಗದ ಅಧ್ಯಕ್ಷ ಮುರುಘ ರಾಜೇಂದ್ರ ಒಡೆಯರ್, ಸಂಘಟನೆ ಸಂಚಾಲಕ ಟಿ.ಶಫಿವುಲ್ಲಾ, ಪದಾಧಿಕಾರಿಗಳಾದ ಸಾಧಿಕ್‌ವುಲ್ಲಾ, ಟಿಪ್ಪು ಖಾಸಿಂ ಅಲಿ, ಎಚ್.ಶಬ್ಬೀರ್ ಪಾಷ, ಸೈಯದ್ ಖುದ್ದೂಸ್, ಸೈಯದ್ ಸೈಪುಲ್ಲಾ, ಪರ್ವಿಜ್ ಸಜ್ಜಾದ್, ಬಿ.ದಾದಾ ಬುಡೇನ್‌ಸಾಬ್ ಮತ್ತಿತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net