ಕೋಟೆ ಅಂಗಳದಲ್ಲಿ ರಥೋತ್ಸವ

ctd 10 kote banashakari
Published on

ಚಿತ್ರದುರ್ಗ: ನಗರದ ಕೋಟೆ ಆವರಣದಲ್ಲಿ ಶ್ರೀ ಬನಶಂಕರಿ ದೇವಿ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

ಬನದ ಹುಣ್ಣಿಮೆ ಅಂಗವಾಗಿ ದೇವಿಗೆ ಮುಂಜಾನೆಯಿಂದಲೇ ವಿಶೇಷ ಪೂಜಾಧಿಗಳ ಸಹಿತ ನಾನಾ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು.

ಸಂಜೆ ಪುಷ್ಪಹಾರ ಸಹಿತ ಅಲಂಕೃತ ರಥದಲ್ಲಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಅನ್ನದ ಎಡೆಯೊಂದಿಗೆ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ರಥೋತ್ಸವ ಆರಂಭವಾಯಿತು.

ಜಯಘೋಷ ಗಳೊಂದಿಗೆ ಭಕ್ತರು ತೇರು ಎಳೆದು ಭಕ್ತಿ ಸಮರ್ಪಿಸಿದರು. ಈ ವೇಳೆ ಶ್ರೀ ಬನಶಂಕರಿ ದೇವಾಲಯದ ಆಡಳಿತ ಮಂಡಳಿ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net