ಸಮಾಜವಾದಿ ನಾಯಕ, ಮಾಜಿ ಸಚಿವ ಡಿ.ಮಂಜುನಾಥ್ ಇನ್ನಿಲ್ಲ

DEATH-D-MANJUNATH 3 FEB 20
Published on

ಚಿತ್ರದುರ್ಗ: ಸಮಾಜವಾದಿ ನಾಯಕ ಜನತಾ ಪರಿವಾರದ ಹಿನ್ನೆಲೆಯಲ್ಲಿ ಬೆಳೆದ ಮಾಜಿ ಸಚಿವ ಡಿ.ಮಂಜುನಾಥ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನ ಹೊಂದಿದರು.
ಮೂಲತಃ ಚಳ್ಳಕೆರೆ ತಾಲೂಕು ಜಾಜೂರು ಗ್ರಾಮದ ಡಿ.ಮಂಜುನಾಥ್ ಅವರು, ಹಿರಿಯೂರು ಕ್ಷೇತ್ರದಲ್ಲಿ ಶಾಸಕರಾಗಿ, ಜನತಾಪರಿವಾರದಲ್ಲಿ ವಿವಿಧ ಖಾತೆ ನಿರ್ವಹಿಸಿದ್ದರು.
ಕಳೆದ ನಾಲ್ಕೈದು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ಹಿರಿಯೂರಿನ ತೋಟದ ಮನೆಯಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದರು. ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಬೆಂಗಳೂರು ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು.
ಇಂದು ಮಧ್ಯಾಹ್ನ 330ಕ್ಕೆ ಕೊನೆಯುಸಿರೆಳೆದರು. ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಹಿರಿಯೂರಲ್ಲಿ ಮಂಗಳವಾರ ಅಂತ್ಯಕ್ರಿಯೆ ಜರುಗಲಿದೆ ಎಂದು ಮೃತರ ಪುತ್ರ, ಜಿಪಂ ಮಾಜಿ ಸದಸ್ಯ ಜಗದೀಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net