ಸುರೇಶ್‌ಬಾಬು ರೈತ ಸಂಘದ ಹೊಸ ಅಧ್ಯಕ್ಷ

CTD 4 SURESH BABAU
Published on

ಚಿತ್ರದುರ್ಗ: ರೈತ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಬಸ್ತಿಹಳ್ಳಿ ಜಿ.ಸುರೇಶ್ ಬಾಬು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ನಗರದ ಎಪಿಎಂಸಿ ರೈತ ಭವನದಲ್ಲಿ ಸೋಮವಾರ ಆಯೋಝಿಸಿದ್ದ ರೈತ ಸಮ್ಮಿಲನ ಕಾರ್ಯಕ್ರಮದಲ್ಲಿ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಗೌರವಾಧ್ಯಕ್ಷ-ಕೊಟ್ರಬಸಪ್ಪ, ಕಾರ್ಯಾಧ್ಯಕ್ಷ-ಕೆ.ಸಿ.ಹೊರಕೇರಪ್ಪ, ಉಪಾಧ್ಯಕ್ಷರು-ಎಂ.ಆರ್.ಪುಟ್ಟಸ್ವಾಮಿ, ಎಂ.ಬಿ.ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಅಂದನೂರು ಶಂಕರಪ್ಪ, ಪ್ರಧಾನ ಕಾರ್ಯದರ್ಶಿ-ಅಮೃತೇಶ್, ಸಹ ಕಾರ್ಯದರ್ಶಿ-ಬಿ.ಡಿ.ಶ್ರೀನಿವಾಸ್, ಲಕ್ಷ್ಮೀಕಾಂತ್, ಸಂಘಟನಾ ಕಾರ್ಯದರ್ಶಿಗಳು-ಎ.ತಿಪ್ಪೇಸ್ವಾಮಿ, ರವಿಕುಮಾರ್, ವಿ.ಶ್ರೀನಿವಾಸ್‌ರೆಡ್ಡಿ, ಕೃಷ್ಣಮೂರ್ತಿ, ಗೌಸ್‌ಫೀರ್, ಕೋಶಾಧ್ಯಕ್ಷ-ಸಿ.ಆರ್.ತಿಮ್ಮಣ್ಣ, ಮಹಿಳಾ ಸಂಚಾಲಕರು-ಕೆ.ಎನ್.ಸಿದ್ದಮ್ಮ, ಆರ್.ಲಕ್ಷ್ಮೀ, ಪದಾಧಿಕಾರಿಗಳಾಗಿ ಅಜ್ಜಣ್ಣಜ್ಜ, ಶಿವಕುಮಾರ್, ಕೃಷ್ಣಸ್ವಾಮಿ, ರಾಜಣ್ಣ, ಆರ್.ಬಿ.ನಿಜಲಿಂಗಪ್ಪ, ವರಿಷ್ಠ ಮಂಡಳಿ ಸದಸ್ಯರಾಗಿ ಕೆ.ಗೋವಿಂದರಾಜು ಆಯ್ಕೆಯಾಗಿದ್ದಾರೆ.

ರಾಜ್ಯಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ, ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ರಾಮು, ರಾಮಕೃಷ್ಣಯ್ಯ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ರಾಜಣ್ಣ, ಕೃಷ್ಣಸ್ವಾಮಿ, ಕಲ್ಪನಾ, ಕೆ.ಟಿ.ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ, ಹಂಪಣ್ಣ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net