

ಚಿತ್ರದುರ್ಗ: ಸಮಾನತೆ, ಜಾತ್ಯಾತೀತತೆ, ಸಹಬಾಳ್ವೆ, ಮಾನವೀಯತೆ, ಸಹೋದರತೆ ಹಾಗೂ ಸೌಹಾರ್ದ ಆಶಯಗಳನ್ನು ಹೊಂದಿರುವ ಜಗತ್ತಿನ ಏಕೈಕ ಸಂವಿಧಾನ ನಮ್ಮದೆಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಭೋವಿ ಗುರು ಪೀಠದಲ್ಲಿ ಎಸ್‌ಜೆಎಸ್ ಸಮೂಹ ಸಂಸ್ಥೆಗಳಿಂದ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ವರ್ತಮಾನದ ಬಿಕ್ಕಟ್ಟುಗಳಿಗೆ ಸಂವಿಧಾನದಲ್ಲಿ ಉತ್ತರ ಕಾಣಬಹುದಾಗಿದೆ. ಅಂಬೇಡ್ಕರ್ ಅವರು ಭಾರತದಲ್ಲಿರುವ ವಿವಿಧತೆ ಅರ್ಥ ಮಾಡಿಕೊಂಡು ಕೊಟ್ಟಿರುವ ಸಂವಿಧಾನ, ಸಮಬಾಳು, ಸಮಪಾಲಿನೊಂದಿಗೆ ಸಮಾನತೆಯ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದರು.
ಸಿಇಒ ಗೌನಹಳ್ಳಿ ಗೋವಿಂದಪ್ಪ, ಪ್ರಾಚಾರ್ಯ ಕನಕದಾಸ್, ಮುಖ್ಯಶಿಕ್ಷಕ ಉಮೇಶ್, ಪತ್ರಕರ್ತ ಓಂಕಾರಮೂರ್ತಿ ಇತರರಿದ್ದರು.