ಹಸಿರು ಇಲ್ಲದಿದ್ದರೆ ಮಾನವ ನಾಶ

CTD 5 bovi
Published on

ಚಿತ್ರದುರ್ಗ: ವಿಶ್ವ ಪರಿಸರ ದಿನದ ಅಂಗವಾಗಿ ಶುಕ್ರವಾರ ನಗರದ ವಿವಿಧೆಡೆ ಸಸಿಗಳನ್ನು ನೆಡಲಾಯಿತು.

ನಗರದ ಭೋವಿ ಗುರುಪೀಠದ ಆವರಣದಲ್ಲಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಸಿ ನೆಟ್ಟು ಮಾತನಾಡಿ, ಹಸಿರು ಇದ್ದರೆ ಉಸಿರು, ಹಸಿರೇ ಉಸಿರುಗಟ್ಟಿದ್ದರೆ ಮಾನವನ ವಿನಾಶ ಪ್ರಾರಂಭವಾದಂತೆ ಎಂದು ಆತಂಕ ವ್ಯಕ್ತಪಡಿಸಿದರು.

ಸಾಮಾಜಿಕ ನ್ಯಾಯದಲ್ಲಿ ಮಾನವರೆಲ್ಲರೂ ಸಮಾನರು. ಪ್ರಕೃತಿ ನ್ಯಾಯದಲ್ಲಿ ಸರ್ವ ಜೀವ, ಜಂತು, ಪಶು, ಪಕ್ಷಿ, ಕ್ರಿಮಿ, ಕೀಟ ಸಸ್ಯ ಎಲ್ಲವೂ ಸಮಾನ ಎಂದರು.

ರಾಮಕೃಷ್ಣ ಪ್ರೌಢಶಾಲೆ ಮುಖ್ಯಶಿಕ್ಷಕ ಉಮೇಶ್, ಶಿಕ್ಷಕ ಶ್ರೀಧರ, ವ್ಯವಸ್ಥಾಪಕ ಶಿವಕುಮಾರ್, ಮಹಾಂತೇಶ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net