![PARISARA [UNSET]](http://media.assettype.com/vijayavani-media%2Fimport%2Fcdn.vvimgs.com%2Fwp-content%2Fuploads%2F2020%2F06%2FPARISARA-UNSET.jpg?w=480&auto=format%2Ccompress&fit=max)
![PARISARA [UNSET]](http://media.assettype.com/vijayavani-media%2Fimport%2Fcdn.vvimgs.com%2Fwp-content%2Fuploads%2F2020%2F06%2FPARISARA-UNSET.jpg?w=480&auto=format%2Ccompress&fit=max)
v
ಚಿತ್ರದುರ್ಗ: ವಿಶ್ವಪರಿಸರ ದಿನಾಚರಣೆ ಅಂಗವಾಗಿ ಜೂ.5ರ ಬೆಳಗ್ಗೆ 11 ಗಂಟೆಗೆ ನಗರದ ಗಾಯತ್ರಿ ಕಲ್ಯಾಣ ಮಂಟಪ ಸಮೀಪದ ರಸ್ತೆ ಬದಿ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಜಿಪಂ, ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ಇಲಾಖೆ ಹಾಗೂ ನಗರ ಸಭೆ ಸಹಯೋಗದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚೋಳರಾಜಪ್ಪ ತಿಳಿಸಿದ್ದಾರೆ.