ಮಠದಲ್ಲಿ ಸಹಪಂಕ್ತಿ ಭೋಜನ

muruga sharanaru1
Published on

ಚಿತ್ರದುರ್ಗ: ಸೂರ್ಯಗ್ರಹಣ, ಚಂದ್ರಗ್ರಹಣ ಅಥವಾ ಇಂತಹ ಇನ್ನಿತರೆ ಪ್ರಕ್ರಿಯೆಗಳು ಬ್ರಹ್ಮಾಂಡದಲ್ಲಿ ನಡೆಯುವ ನಿಸರ್ಗ ದತ್ತವಾದ ಚಲನೆಗಳು ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಮುರುಘಾ ಮಠದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಕಂಕಣ ಸೂರ್ಯ ಗ್ರಹಣವನ್ನು ಸಹಭೋಜನದೊಂದಿಗೆ ವೀಕ್ಷಣೆ ಮಾಡಿ ಮಾತನಾಡಿ, ವಿಜ್ಞಾನಿಗಳು ಹೇಳಿದ ಹಾಗೆ ಕನ್ನಡಕ ಹಾಕಿಕೊಂಡು ನೋಡಿದರೆ ತೊಂದರೆ ಆಗುವುದಿಲ್ಲ. ಸೂರ್ಯಗ್ರಹಣದ ಸಂದರ್ಭದಲ್ಲಿ ಏನೂ ಅಮಂಗಲ ಆಗುವುದಿಲ್ಲ ಎಂದು ತಿಳಿಸಿದರು.

ಶ್ರೀ ಬಸವನಾಗಿದೇವ ಸ್ವಾಮೀಜಿ, ಶ್ರೀ ಕೇತೇಶ್ವರ ಸ್ವಾಮೀಜಿ, ಶ್ರೀ ಮಾಚಿದೇವ ಸ್ವಾಮೀಜಿ, ಆರ್.ಶೇಷಣ್ಣಕುಮಾರ್, ವಕೀಲ ರಹಮತ್‌ವುಲ್ಲಾ, ಎಚ್.ಸಿ.ನಿರಂಜನಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net