

ಚಿತ್ರದುರ್ಗ: ತಾಲೂಕಿನ ಗೊಲ್ಲನಕಟ್ಟೆ ಗ್ರಾಮದಲ್ಲಿ ಬಟ್ಟೆ ತೊಳೆಯಲು ಹೋದ ತಾಯಿ ಹಾಗೂ ಮಗಳು ನೀರಿನಲ್ಲಿ ಮುಳುಗಿ ಅಸು ನೀಗಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಮೃತರನ್ನು ಗ್ರಾಮದ ಶಿವಲಿಂಗಮ್ಮ(46)ಹಾಗೂ ಸಂಗೀತಾ(22)ಎಂದು ಗುರುತಿಸಲಾಗಿದೆ. ಗ್ರಾಮದ ಗೋಕಟ್ಟೆಯಲ್ಲಿ ಬಟ್ಟೆ ತೊಳೆಯಲು ಹೋದಾಗ ಒಬ್ಬರು ಕಾಲು ಜಾರಿ ಬಿದ್ದಿರಬೇಕು. ಅವರನ್ನು ಮತ್ತೊಬ್ಬರು ರಕ್ಷಿಸಲು ಹೋಗಿ ದುರ್ಘಟನೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.