

ಚಿತ್ರದುರ್ಗ: ಜಿಲ್ಲಾ ಯುವ ಕಾಂಗ್ರೆಸ್ ಫೆ.10 ರಿಂದ 10 ದಿನಗಳವರೆಗೆ ನಿರುದ್ಯೋಗ ನೋಂದಣಿ ಅಭಿಯಾನ ಹಮ್ಮಿಕೊಂಡಿದೆ ಎಂದು ಯುವ ಕಾಂಗ್ರೆಸ್ ಮುಖಂಡ ಎಂ.ಪಿ. ಮಧುಪಾಲೇಗೌಡ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿರುದ್ಯೋಗಿಗಳು ಹಾಗೂ ನಿರುದ್ಯೋಗದ ಅಪಾಯವನ್ನು ಅರಿತಿರುವ ಪ್ರಜ್ಞಾವಂತ ಯುವ ಜನರು 8151994411 ಸಂಖ್ಯೆಗೆ ಮಿಸ್‌ಕಾಲ್ ಕೊಡುವ ಮೂಲಕ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ನಿರುದ್ಯೋಗದಿಂದ ತಪ್ಪು ದಾರಿ ತುಳಿಯದಂತೆ ಯುವಜನರಲ್ಲಿ ಜಾಗೃತಿ ಮೂಡಿಸಬೇಕಿದ್ದು,ಉದ್ಯೋಗ ಸೃಷ್ಟಿ ಭರವಸೆಗಳನ್ನು ಈಡೇರಿಸುವಂತೆ ಕೇಂದ್ರ ಹಾಗೂ ರಾಜ್ಯಸರ್ಕಾರವನ್ನು ಅಭಿಯಾನದ ಮೂಲಕ ಒತ್ತಾಯಿಸೋಣ. ಇದಕ್ಕಾಗಿ ಸಾಮಾಜಿಕ ಜಾಲತಾಣ ಗಳನ್ನು ಸಮರ್ಥವಾಗಿ ಬಳಸೋಣ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್‌ಪೀರ್, ಮುಖಂಡರಾದ ಕರಿಯಪ್ಪ, ರಫಿ, ವಿಕಾಸ್, ಮಹ್ಮದ್ ಹಸನ್ ತಾಹೀರ್, ಸೈಯದ್ ಖುದ್ದೂಸ್, ಕಾರ್ತಿಕ್, ಅಶ್ವಿನ್‌ಕುಮಾರ್, ಮೋಹನ್ ಪೂಜಾರಿ ಇದ್ದರು.