ನೆಗಟಿವ್ ಬದಲು ಪಾಸಿಟಿವ್ ಎಂದಾಗಿತ್ತಾ?

Carona chitra (2)
Published on

ಚಿತ್ರದುರ್ಗ: ಜಿಲ್ಲೆಯ ಯುವತಿಯಲ್ಲಿ (ಪಿ.1290) ಕರೊನಾ ಸೋಂಕು ಪತ್ತೆಯಾಗಿದೆ ಎಂದು ಮೇ 19ರ ಆರೋಗ್ಯ ಇಲಾಖೆ ಬೆಳಗಿನ ವರದಿ ಹೇಳಿತ್ತು.

ತೀವ್ರ ಉಸಿರಾಟ ತೊಂದರೆ (ಎಸ್‌ಎಆರ್‌ಐ) ಬಳಲುತ್ತಿರುವ ಈ ಯುವತಿ (17) ಸದ್ಯ ಉಡುಪಿ ಜಿಲ್ಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆಂದು ಅಂದು ಆರೋಗ್ಯ ಇಲಾಖೆ ತಿಳಿಸಿತ್ತು.

ಹೊಳಲ್ಕೆರೆ ತಾಲೂಕಿನ ತಾಳಿಕಟ್ಟೆ ಗ್ರಾಮದ ಈಕೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೇ 11ರಂದು ಜ್ವರಕ್ಕೆ ಚಿಕಿತ್ಸೆ ಪಡೆದಿದ್ದು, ಹೆಚ್ಚಿನ ತಪಾಸಣೆಗೆಂದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ನಂತರ ಈಕೆಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ 14ರಂದು ನಡೆಸಿದ್ದ ಗಂಟಲು ದ್ರವದ ಮಾದರಿ ಪರೀಕ್ಷಾ ನೆಗೆಟಿವ್ ಬಂದಿತ್ತು. ಬಳಿಕ ಹೆಚ್ಚಿನ ತಪಾಸಣೆಗೆಂದು ಮಣಿಪಾಲ್‌ಗೆ ಹೋಗಿದ್ದಾಗ ಅಲ್ಲಿ 16 ನಡೆಸಿದ್ದ ಗಂಟಲು ದ್ರವದ ಮಾದರಿ ಪರೀಕ್ಷೆ ಪಾಸಿಟಿವ್ ಬಂದಿದ್ದು, ಈಗ ಮತ್ತೊಮ್ಮೆ ನಡೆಸಿದ ಪರೀಕ್ಷೆಯ ನೆಗಟಿವ್ ಬಂದಿದೆನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net