ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರು ಕ್ಷಯ ರೋಗಕ್ಕೆ ಬಲಿ

ctd 9 aysh
Published on

ಚಿತ್ರದುರ್ಗ: ಕ್ಷಯರೋಗ ನಿರ್ಮೂಲನೆಗೆ ಸಮುದಾಯದ ಸಹಭಾಗಿತ್ವ, ಸಹಕಾರ ಅಗತ್ಯವೆಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ರಂಗನಾಥ್ ಹೇಳಿದರು.

ಜಿಲ್ಲಾಡಳಿತ ಮತ್ತಿತರ ಇಲಾಖೆ, ಸಂಸ್ಥೆಗಳ ಆಶ್ರಯದಲ್ಲಿ ಸೋಮವಾರ ಜಿಲ್ಲಾ ಆಯುಷ್ ಅಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಆಂದೋಲನದಲ್ಲಿ ಆಯುಷ್ ವೈದ್ಯಾಧಿಕಾರಿಗಳಿಗೆ ಎಚ್‌ಐವಿ, ರಕ್ತದಾನ, ಕರೊನಾ ವೈರಸ್ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದಲ್ಲಿ ಕ್ಷಯರೋಗ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರನ್ನು ಜೀವ ಬಲಿ ಪಡೆಯುತ್ತಿದ್ದು, ಎಲ್ಲ ರೋಗಗಳಿಗಿಂತ ಅಪಾಯಕಾರಿಯಾ ದ ಈ ರೋಗವನ್ನು ಶೇ.100 ಪ್ರಮಾಣದಲ್ಲಿ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ಚಿತ್ರದುರ್ಗ ಹಾಗೂ ಚಳ್ಳಕೆರೆಯಲ್ಲಿ ಕ್ಷಯ ರೋಗ ಪತ್ತೆ ಪ್ರಯೋಗಾಲಯಗಳಿವೆ.

ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿಯೂ ಕಫ ಪರೀಕ್ಷಾ ಕಾರ್ಯ ನಡೆಯುತ್ತಿದೆ. ಮಾ. 24 ರಂದು ವಿಶ್ವ ಕ್ಷಯರೋಗ ನಿಯಂತ್ರ ಣ ದಿನದ ಅಂಗವಾಗಿ ಮಾರ್ಚ್ ತಿಂಗಳನ್ನು ಕ್ಷಯ ರೋಗ ನಿಯಂತ್ರಣ ಮಾಸವನ್ನಾಗಿ ಆಚರಿಸಲಾಗುವುದು ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಕೆ.ಎಲ್.ವಿಶ್ವನಾಥ್ ಮಾತನಾಡಿ, ಕ್ಷಯರೋಗ ತ್ವರಿತವಾಗಿ ಹಬ್ಬುತ್ತದೆ. ಕೆಲವೊಮ್ಮೆ ರೋಗಿಯು ಚಿಕಿತ್ಸೆ ಪಡೆಯುವ ಮೊದಲೇ ನೂರಾರು ಜನಕ್ಕೆ ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವೆಲ್ಲರೂ ಈ ಕಾಯಿಲೆ ನಿರ್ಮೂಲನೆಗೆ ಕೈ ಜೋಡಿಸಬೇಕೆಂದರು.

ನೋಡಲ್ ಅಧಿಕಾರಿ ಡಾ.ಬಿ.ಶ್ರೀಕಾಂತ್ ಮಾತನಾಡಿದರು. ಆಯುರ್ವೇದ ತಜ್ಞ ವೈದ್ಯ ಡಾ.ಶಿವಕುಮಾರ್, ಡಾ.ಶ್ರೀಹರ್ಷ, ಆಯುಷ್ ವೈದ್ಯಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net