ಕೃಷಿ ಚಟುವಟಿಕೆ ಚುರುಕು

HLK krushi story 30
Published on

ಚಿತ್ರದುರ್ಗ: ಜಿಲ್ಲಾದ್ಯಂತ ಏಪ್ರಿಲ್ ಮೊದಲ ವಾರದಲ್ಲಿ ಹಲವೆಡೆ ಸುರಿದಿರುವ ಮಳೆಯಿಂದ ರೈತರು ಜಮೀನು ಹಸನು ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ.

ಉತ್ತಮ ಇಳುವರಿ ಹಾಗೂ ಆದಾಯದ ನಿರೀಕ್ಷೆಯೊಂದಿಗೆ ಎಳ್ಳು, ಹೆಸರುಕಾಳು, ಶೇಂಗಾ ಹಾಗೂ ಹತ್ತಿ ಸೇರಿ ಇತರೆ ಬೆಳೆಗಳ ಬಿತ್ತನೆಗೆ ಮುಂದಾಗಿದ್ದಾರೆ. ಕೃಷಿ ಸಾಧನ, ಸಲ ಕರಣೆ, ಬಿತ್ತನೆ ಬೀಜ, ಗೊಬ್ಬರ ಖರೀದಿಯಲ್ಲಿ ತೊಡಗಿದ್ದಾರೆ.

ಕಳೆದ ಒಂದು ವಾರದಿಂದ ಹಲವು ರೈತರ ಬಿತ್ತನೆ ಕಾರ್ಯ ಚುರುಕಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಈ ಬಾರಿ 362340 ಹೆ. ಮುಂಗಾರು ಬಿತ್ತನೆ ಗುರಿ ಇದ್ದು,ಮೇ 11ರವರೆಗೆ 634 ಹೆ.ಬಿತ್ತನೆ ಮಾಡಲಾಗಿದೆ. ಜಿಲ್ಲೆಯಲ್ಲಿ 127 ಹೆ. ದ್ವಿದಳ ಬೆಳೆ, 19 ಹೆ. ಎಣ್ಣೆಕಾಳು, 488 ಹೆ.ವಾಣಿಜ್ಯ ಬೆಳೆಗಳ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net