114 ಕೆರೆಗಳಲ್ಲಿ ಮೀನುಮರಿ ಬಿತ್ತನೆ

fish
Published on

ಚಿತ್ರದುರ್ಗ: ಜಿಲ್ಲೆಯಲ್ಲಿರುವ 431 ಕೆರೆಗಳ ಪೈಕಿ 114 ಕೆರೆಗಳಲ್ಲಿ 121.56 ಲಕ್ಷ ಮೀನು ಮರಿ ಬಿತ್ತನೆ ಮಾಡಲಾಗಿದೆ ಎಂದು ಮೀನುಗಾರಿಕೆ ಇಲಾಖೆ ತಿಳಿಸಿದೆ.

ಜಿಲ್ಲೆಯ ಕೆರೆಗಳಲ್ಲಿ 176 ದೊಡ್ಡ ಕೆರೆಗಳು, 152 ಗ್ರಾಪಂ ಕೆರೆಗಳು, 100 ಖಾಸಗಿ ಕೊಳಗಳು ಹಾಗೂ 3 ಜಲಾಶಯಗಳಿವೆ. ಮತ್ಸ್ಯ ಪಾಲನೆಗೆ 43 ಗ್ರಾಮ ಪಂಚಾಯಿತಿ ಕೆರೆಗಳಲ್ಲಿ 15.90 ಲಕ್ಷ ಮೀನುಮರಿ, ಖಾಸಗಿ ಕೊಳಗಳಲ್ಲಿ 2.54 ಲಕ್ಷ ಮೀನುಮರಿಗಳನ್ನು ಬಿತ್ತನೆ ಮಾಡಲಾಗಿದೆ ಎಂದು ಇಲಾಖೆ ಸಹಾಯಕ ನಿರ್ದೇಶಕ ಡಿ.ಎಸ್.ಶ್ರೀನಿವಾಸ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net