

ಚಿತ್ರದುರ್ಗ: ಜಿಲ್ಲಾಸ್ಪತ್ರೆಗೆ ಬುಧವಾರ ಕೋವಿಡ್-19 ರಾಜ್ಯನೋಡೆಲ್ ಅಧಿಕಾರಿ ಡಾ.ನಂದಾ ಭೇಟಿ ನೀಡಿದರು.
ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಎಂಸಿಎಚ್ ನೂತನ ಕಟ್ಟಡದಲ್ಲಿ ಕೋವಿಡ್-19ರ ಆಸ್ಪತ್ರೆ ಸ್ಥಾಪನೆ ಕುರಿತಂತೆ ಪರಿಶೀಲಿಸಿದರು. ಇನ್ನೆರೆಡು ದಿನಗಳಲ್ಲಿ ಈ ಆಸ್ಪತ್ರೆ ಕಾರ್ಯಾರಂಭ ಮಾಡುವ ನಿಟ್ಟಿನಲ್ಲಿ ಕೆಲ ಸಲಹೆ, ಸೂಚನೆಗಳನ್ನು ನೀಡಿದರು.
ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ, ಡಿಎಸ್ ಡಾ.ಎಚ್.ಜೆ.ಬಸವರಾಜಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿ ರಂಗನಾಥ್ ಮತ್ತಿತರರು ಇದ್ದರು.
ಜಿಲ್ಲೆಯಲ್ಲಿ ಬುಧವಾರ 25 ಜನರ ಗಂಟಲು ದ್ರವ ಸಂಗ್ರಹಿಸಲಾಗಿದೆ. ಹೋಂ ಕ್ವಾರಂಟೈನ್ ಸಂಖ್ಯೆ ಶೂನ್ಯದಲ್ಲೇ ಇದೆ. ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಜಿಲ್ಲೆಗೆ ಬಂದಿರುವ ಜನರ ಪೈಕಿ ಈವರೆಗೆ 25749 ಜನರ ಸ್ಕ್ರೀನಿಂಗ್ ಹಾಗೂ ಈವರೆಗೆ 6513 ಜನರ ಜ್ವರ ತಪಾಸಣೆ ಮಾಡಲಾಗಿದೆ ಆರೋಗ್ಯ ಇಲಾಖೆ ತಿಳಿಸಿದೆ.
28ದಿನಗಳ ಅವಲೋಕನ ಪೂರ್ಣ-219
14 ದಿನಗಳ ಅವಲೋಕನ ಪೂರ್ಣ-310
ಮಂಗಳವಾರ ಸ್ಕ್ರಿನಿಂಗ್ ಸಂಖ್ಯೆ-218
ಪರೀಕ್ಷೆಗೆ ಸಂಗ್ರಹಿಸಿದ್ದ ಮಾದರಿ-25
ಸಾಂಸ್ಥಿಕ ಹೋಂ ಕ್ವಾರಂಟೈನ್-9
ನೆಗೆಟಿವ್ ವರದಿಗಳು-239
ಪರೀಕ್ಷೆ ಫಲಿತಾಂಶ ಬಾಕಿ-42