

ಚಿತ್ರದುರ್ಗ: ಜಿಲ್ಲೆಯಲ್ಲಿ ಶುಕ್ರವಾರ ಇಬ್ಬರಲ್ಲಿ ಕರೊನಾ ಸೋಂಕು ಪತ್ತೆಯಾಗಿದ್ದು, 82 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ ಎಂದು ಡಿಸಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.
ಈವರೆಗೆ ಜ್ವರ ತಪಾಸಣೆಗೆ ಒಳಗಾದವರ ಸಂಖ್ಯೆ 13845 ಹಾಗೂ ಸ್ಕ್ರೀನಿಂಗ್‌ಗೆ ಒಳಗಾದವರ ಸಂಖ್ಯೆ 244995ಕ್ಕೆ ಏರಿದೆ. ಐಸಿಎಂಆರ್ ತಜ್ಞರ ತಂಡ ಮೇ 16ರಂದು ಒಂದು ದಿನ ಜಿಲ್ಲೆಯ 10 ಆಯ್ದಗಳಲ್ಲಿ ಕೋವಿಡ್-19 ಪರೀಕ್ಷೆ ನಡೆಸಲಿದೆ.
ಈವರೆಗೆ ಪರೀಕ್ಷೆಗೆ ಸಂಗ್ರಹಿಸಿರುವ ಒಟ್ಟು ಮಾದರಿ-1596
ನೆಗೆಟಿವ್-1378
ಪಾಸಿಟಿವ್-9
ಗುಣಮುಖ-1
ಒಪ್ಪಿಗೆ ಪರೀಕ್ಷೆ-44
ಬರ ಬೇಕಿರುವ ವರದಿ-165
28 ದಿನದ ಅವಲೋಕನ ಪೂರ್ಣ-310
14 ದಿನ ಅವಲೋಕನ ಪೂರ್ಣ-310
ಸಾಂಸ್ಥಿಕ ಕ್ವಾರಂಟೈನ್83
ಹೋಂ ಕ್ವಾರಂಟೈನ್-256